Saturday, 27th July 2024

ಪಂಜಾಬ್​ ಸರ್ಕಾರಕ್ಕೆ 2000 ಕೋಟಿ ರೂ. ದಂಡ

ಚಂಡೀಗಢ: ಪಂಜಾಬ್‌ನಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಪಂಜಾಬ್​ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸುಮಾರು 2000 ಕೋಟಿ ದಂಡ ವಿಧಿಸಿದೆ.

ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಈ ವಿಷಯದಲ್ಲಿ ಎನ್‌ಜಿಟಿ ಪದೇ ಪದೇ ಆದೇಶ ನೀಡಿದರೂ, ಪಂಜಾಬ್‌ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಂಡಿರ ಲಿಲ್ಲ ಎಂದು ಎನ್​ಜಿಟಿ ತಿಳಿಸಿದೆ.

ಈ ಹಿಂದೆ ಎನ್‌ಜಿಟಿ ಪ್ರತಾಪ್‌ಗಢ, ರಾಯ್ ಬರೇಲಿ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು.

ಘನ ಮತ್ತು ದ್ರವ ತ್ಯಾಜ್ಯದ ದುರುಪಯೋಗಕ್ಕಾಗಿ 3,000 ಕೋಟಿ ರೂಪಾಯಿಯನ್ನು ಪರಿಸರ ಪರಿಹಾರವಾಗಿ ಪಾವತಿಸಲು ಎನ್​ಜಿಟಿ ಕಳೆದ ವಾರ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

error: Content is protected !!