Tuesday, 30th May 2023

ಬೊಲೆರೊ-ಟ್ರ್ಯಾಕ್ಟರ್​​ ನಡುವೆ ಅಪಘಾತ: ನಾಲ್ವರ ಸಾವು

ಧನ್​ಬಾದ್​​ : ಬೊಲೆರೊ ಮತ್ತು ಟ್ರ್ಯಾಕ್ಟರ್​​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟರು. ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.

ಧನ್​ಬಾದ್​ನ ರಾಜ್‌ಗಂಜ್ ಬಳಿಯ ಜಿಟಿ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ರಾಹುಲ್ ಪಾಂಡೆ, ಸಲೀಮ್ ಶೇಖ್, ಅತಿಕುಲ್ ಶೇಖ್ ಮತ್ತು ಅಂಜರುಲ್ ಶೇಖ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಗಂಜ್ ಠಾಣಾ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

error: Content is protected !!