ನವದೆಹಲಿ: ಛತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಫಲಿತಾಂಶ ಬಂದು ಐದು ದಿನ ಕಳೆದರೂ ಇನ್ನೂ ತನ್ನ ಮುಖ್ಯಮಂತ್ರಿಗಳನ್ನು ಘೋಷಿಸಿಲ್ಲ.
ಹೀಗಾಗಿ ಮೂರು ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳ ಆಯ್ಕೆಯಾಗಿ ಇದೀಗ ವೀಕ್ಷಕರನ್ನು ನೇಮಿಸಲಾಗಿದೆ.
ರಾಜಸ್ಥಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವಡೆ, ಸರೋಜ್ ಪಾಂಡೆ, ಮಧ್ಯಪ್ರದೇಶದಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಕೆ ಲಕ್ಷ್ಮಣ್, ಆಶಾ ಲಾಕ್ರಾ, ಮತ್ತು ಛತ್ತೀಸ್ಗಢದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಮತ್ತು ಸರ್ಬಾನಂದ ಸೋನೋವಾಲ್ ಮತ್ತು ದುಷ್ಯಂತ್ ಗೌತಮ್ ವೀಕ್ಷಕರಾಗಿದ್ದಾರೆ.
ಕೇಂದ್ರ ವೀಕ್ಷಕರು ಮೂರು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷಗಳ ಸಭೆ ಮೇಲ್ವಿಚಾರಣೆ ಮಾಡುವ ಮೂಲಕ ನೂತನ ಸಿಎಂಗಳನ್ನು ನಿರ್ಧರಿಸಲಿದ್ದಾರೆ.