Wednesday, 11th December 2024

ಬಂಗಾಳ ಶಾಸಕರ ಭವನದ ಆವರಣದಲ್ಲಿ ಅಂಗರಕ್ಷಕನ ಶವ ಪತ್ತೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕನ ಅಂಗರಕ್ಷಕನ ಶವ ಪಶ್ಚಿಮ ಬಂಗಾಳ ಶಾಸಕರ ಭವನದ ಆವರಣದಲ್ಲಿ ಶನಿವಾರ ಪತ್ತೆಯಾಗಿದೆ.
ಮೃತರನ್ನು ಜಯದೇಬ್ ಘೋರಾಯ್ ಎಂದು ಗುರುತಿಸಲಾಗಿದ್ದು, ಇವರು ಪುರುಲಿಯ ಬಂಡ್ವಾನ್ ಟಿಎಂಸಿ ಶಾಸಕ ರಾಜೀಬ್ ಲೋಚನ್ ಅವರ ಅಂಗರಕ್ಷಕರಾಗಿದ್ದರು ಎಂದು ಹೇಳಿದ್ದಾರೆ.
ಈ ಸಾವಿಗೆ ಕಾರಣ ಪತ್ತೆ ಮಾಡಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಶಾಸಕರ ಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.