ಅನಂತನಾಗ್: ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಪಿಯ ಮಾಜಿ ಸರಪಂಚ್ ರ ಹತ್ಯೆಯಾಗಿದೆ.
ಜೈಪುರ ಮೂಲದ ದಂಪತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಿಜೆಪಿಯ ಮಾಜಿ ಸರಪಂಚ್ ನನ್ನು ಐಜಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಹೀರ್ಪೋರಾದಲ್ಲಿ ಐಜಾಜ್ ಅಹ್ಮದ್ ಶೇಖ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆ ಪೊಲೀಸರು ಪ್ರದೇಶವನ್ನು ಸುತ್ತುವರಿದು ತೀವ್ರ ಗಾಯಗೊಂಡ ಐಜಾಜ್ ಅಹ್ಮದ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಯನ್ನಾರ್ ಪ್ರದೇಶದಲ್ಲಿ ಜೈಪುರದ ದಂಪತಿ ಗಾಯಗೊಂಡಿದ್ದಾರೆ.
ಅನಂತ್‌ನಾಗ್ ಜಿಲ್ಲೆಯ ಯನ್ನಾರ್‌ನಲ್ಲಿ ಜೈಪುರ ನಿವಾಸಿ ಫರ್ಹಾ ಎಂಬ ಮಹಿಳೆ ಮತ್ತು ಆಕೆಯ ಸಂಗಾತಿ ತಬ್ರೇಜ್ ಮೇಲೆಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.