Sunday, 10th November 2024

ಐ ಡ್ರಾಪ್ ವಿವಾದ: ಉತ್ಪಾದನೆ ಸ್ಥಗಿತ

ವದೆಹಲಿ: ಔಷಧ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಯುಎಸ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಬ್ಯಾಕ್ಟೀರಿಯಾದ ಮಾಲಿನ್ಯದಿಂದಾಗಿ ಈ ಕಣ್ಣಿನ ಹನಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ನಿಯಂತ್ರಕರು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಅಮೆರಿಕದಲ್ಲಿ ಭಾರತೀಯ ಮೂಲದ ಈ ಐ ಡ್ರಾಪ್ ವಿವಾದ ದಲ್ಲಿದ್ದು, ಸೋಂಕಿನಿಂದ ಹಲವಾರು ಜನರಿಗೆ ಅಪಾಯವನ್ನುಂಟು ಮಾಡಿದ ಪ್ರಕರಣ ಗಳು ವರದಿಯಾದ ಬೆನ್ನಲ್ಲೇ, ಭಾರತೀಯ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಣ್ಣಿನ ಹನಿಗಳನ್ನು ಹಿಂಪಡೆದಿದೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಈ ಬಗ್ಗೆ ಮಾಹಿತಿ ನೀಡಿದೆ. ಈ ಔಷಧವು ದೃಷ್ಟಿ ನಷ್ಟ ಮತ್ತು ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ನಂತರ US ಮಾರುಕಟ್ಟೆಯಿಂದ ತನ್ನ ಕಣ್ಣಿನ ಹನಿ ಗಳನ್ನು(eye drops) ಹಿಂಪಡೆದಿದೆ ಎಂದು FDA(ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ) ಹೇಳುತ್ತದೆ.

ಚೆನ್ನೈ ಮೂಲದ ಕಂಪನಿಯು ಮಾಲಿನ್ಯದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೃತಕ ಕಣ್ಣೀರಿನಿಂದ ರೂಪಿಸಲಾದ ಕಣ್ಣಿನ ಹನಿಗಳನ್ನು ಮಾರುಕಟ್ಟೆಯಿಂದ ಹಿಂಪಡೆ ಯುತ್ತಿದೆ ಎಂದು ಎಫ್‌ಡಿಎ ಹೇಳಿಕೆಯಲ್ಲಿ ತಿಳಿಸಿದೆ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಯ ಐ ಡ್ರಾಪ್ಸ್‌ ನಿಂದ ಹಲವಾರು ಯುಎಸ್ ರಾಜ್ಯಗಳಲ್ಲಿ ವಿವಿಧ ಕಣ್ಣಿನ ಸೋಂಕುಗಳ ಬಗ್ಗೆ ಎಫ್‌ಡಿಎಗೆ ಎಚ್ಚರಿಕೆ ನೀಡಿತ್ತು.