Saturday, 27th July 2024

ದೇಶದ ಮಹಾನಗರಗಳಲ್ಲಿ ಹೀಗಿದೆ ತೈಲೋತ್ಪನ್ನಗಳ ದರ

ನವ ದೆಹಲಿ : ತೈಲೋತ್ಪನ್ನಗಳ ದರ ಶುಕ್ರವಾರ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 88ಕ್ಕೆ ಹೆಚ್ಚಳವಾಗಿದೆ.

87ರೂ. 85 ಪೈಸೆ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ, 88ರೂ 14 ಪೈಸೆಗೆ ಬಂದು ತಲುಪುವುದರ ಮೂಲಕ 29 ಪೈಸೆ ಹೆಚ್ಚಳ ವಾಗಿದೆ. ಡಿಸೇಲ್ ಲೀಟರ್ ಗೆ 78ರೂ 38 ಪೈಸೆ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.64 ರೂ ಆದರೇ, ಡೀಸೆಲ್ ಪ್ರತಿ ಲೀಟರ್ ಗೆ 85.32 ರೂ.ಗೆ ಏರಿದೆ. ಚೆನೈನಲ್ಲಿ 90.44 ರೂ. ಪೆಟ್ರೋಲ್ ನ ಪ್ರತಿ ಲೀಟರ್ ಬೆಲೆಯಾದರೇ, 83.52 ರೂ ಪ್ರತಿ ಲೀಟರ್ ಡಿಸೇಲ್ ಬೆಲೆಯಾಗಿದೆ. ಕೊಲ್ಕತ್ತಾದಲ್ಲಿ 89.44 ರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಾದರೇ, 81.96 ರೂ ಡಿಸೇಲ್ ಬೆಲೆಗೆ ಏರಿಕೆಯಾಗಿದೆ.

ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ರೂ.90.78 ಆಗಿದೆ. ಅಂತೆಯೇ, ಡೀಸೆಲ್ ದರ ಪ್ರತಿ ಲೀಟರಿಗೆ ರೂ.82.72 ಆಗಿದೆ.

Leave a Reply

Your email address will not be published. Required fields are marked *

error: Content is protected !!