ಚಳಿಗಾಲ ಸಮೀಪಿಸುತ್ತಿದ್ದಂತೆ, ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆ ಎಂದರೆ ಅದು ಕೂದಲುದುರುವ ಸಮಸ್ಯೆ. ಋತುಗಳ ಬದಲಾವಣೆಯಿಂದಾಗಿ ಹೆಚ್ಚು ಕೂದಲು ಉದುರುವ ಸಾಧ್ಯತೆಯಿದೆ. ಹೊರಗಿನ ಶುಷ್ಕ ಗಾಳಿಯು ಕೂದಲಿನ ತೇವಾಂಶವನ್ನು ಹೀರಿಕೊಳ್ಳುವ ಮೂಲಕ ನಿಮ್ಮ ನೆತ್ತಿಯನ್ನು ನಿರ್ಜಲೀಕರಣಗೊಳಿಸುತ್ತದೆ, ಇದು ಚಳಿಗಾಲದಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲದೇ ಕೂದಲು ಒಡೆಯುವುದು ಮತ್ತು ತೆಳುವಾಗುವುದು, ಒಣ ಕೂದಲು ಮತ್ತು ಒಣ ನೆತ್ತಿ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಒಣ ನೆತ್ತಿಯ ಸಮಸ್ಯೆಯಿಂದ ಕಾಡುವಂತಹ ಮತ್ತೊಂದು ಸಮಸ್ಯೆ ಎಂದರೆ ಅದು ತಲೆಹೊಟ್ಟು. ಇದು ನಿಮ್ಮ ತಲೆಯಲ್ಲಿ ತುರಿಕೆಯನ್ನು ಉಂಟುಮಾಡುತ್ತದೆ. ಆದರೆ, ಕರಿಷ್ಮಾ ತನ್ನಾ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಕೆಲವೊಂದು ಹ್ಯಾಕ್ಗಳನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ನಟಿ ಬಲವಾದ ಮತ್ತು ದಪ್ಪ ಕೂದಲಿನ ರಹಸ್ಯವನ್ನು(Hair Care Tips) ಬಹಿರಂಗಪಡಿಸಿದ್ದಾರೆ.
ಕರಿಷ್ಮಾ ಪ್ರಕಾರ, ಕೂದಲು ಉದುರುವುದನ್ನು ತಡೆಯಲು ಉತ್ತಮ ಅಭ್ಯಾಸಗಳು:
ಹೇರ್ ಪುಲ್ಲಿಂಗ್
ಇದು ನಿಮ್ಮ ಕೂದಲನ್ನು ಬೇರುಗಳಿಂದ ಲಘುವಾಗಿ ಹಿಡಿದು ಕೆಲವು ನಿಮಿಷಗಳ ಕಾಲ ಸೂಕ್ಷ್ಮ ಬಲದಿಂದ ಎಳೆಯಿರಿ.
ತಲೆ ತಟ್ಟುವಿಕೆ
ಪ್ರತಿದಿನ 5 ನಿಮಿಷಗಳ ಕಾಲ ನಿಮ್ಮ ಕೈಯಿಂದ ನಿಮ್ಮ ನೆತ್ತಿಯನ್ನು ನಿಧಾನವಾಗಿ ಟ್ಯಾಪ್ ಮಾಡಿ.
ಹಿಂದಿನಿಂದ ಬಾಚುವಿಕೆ
ನಿಮ್ಮ ಎಲ್ಲಾ ಕೂದಲನ್ನು ನಿಮ್ಮ ಮುಖದ ಮುಂದೆ ತೆಗೆದುಕೊಂಡು ನಿಮ್ಮ ಮುಂಭಾಗದಲ್ಲಿ ಬಾಚಿಕೊಳ್ಳಿ.
ಪ್ರಾಣ ಮುದ್ರೆ
ಇದು ಯೋಗ ಮುದ್ರೆಯಾಗಿದ್ದು, ಇದು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ನಿಮ್ಮ ಬೆನ್ನನ್ನು ನೇರವಾಗಿರಿಸಿ ಮತ್ತು ಕಣ್ಣುಗಳನ್ನು ಮುಚ್ಚಿ ಪದ್ಮಾಸನದಂತಹ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಹೆಬ್ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳಿನ ತುದಿಗಳನ್ನು ಎರಡೂ ಕೈಗಳಲ್ಲಿ ಜೋಡಿಸಿ. ನಿಮ್ಮ ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ನೇರವಾಗಿ ಮತ್ತು ಸ್ವಲ್ಪ ಹಿಗ್ಗಿಸಿ. 20-25 ನಿಮಿಷಗಳ ಕಾಲ ಹಾಗೆ ಬಿಡಿ.
ಇದನ್ನೂ ಓದಿ:ಚಳಿಗಾಲದಲ್ಲಿ ಈ ಹಣ್ಣನ್ನು ತಪ್ಪದೇ ತಿನ್ನಿ!
ಈ ಎಲ್ಲಾ ಅಭ್ಯಾಸಗಳಿಂದ ನಿಮ್ಮ ಕೂದಲು ಉದುರುವುದನ್ನು ತಡೆಯಬಹುದು. ಹಾಗಾಗಿ ಚಳಿಗಾಲದಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಯಲು ಈ ಸಲಹೆಗಳನ್ನು ಅನುಸರಿಸಿ.