ಸುಂದರವಾಗಿ ಕಾಣಬೇಕು ಎನ್ನುವ ಬಯಕೆಯಿಂದ ನಾವು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಭೇಟಿ ನೀಡುವ ಸಲೂನ್ ಅಥವಾ ಬ್ಯೂಟಿ ಪಾರ್ಲರ್‌ಗಳು (Beauty Salons) ನಮಗೆ ಕೆಲವು ಕಾಯಿಲೆಗಳನ್ನು (Health Care) ಕೊಡಬಹುದು ಎಚ್ಚರ. ಹೀಗಾಗಿ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಬಹುಮುಖ್ಯ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಹೇಳಿದೆ.
ಸಲೂನ್ ಅಥವಾ ಬ್ಯೂಟಿ ಪಾರ್ಲರ್‌ಗಳು (salon or beauty parlour) ತಮ್ಮ ಗ್ರಾಹಕರಿಗೆ ಅದ್ಭುತ ಸೇವೆಯನ್ನು ನೀಡಬೇಕು ಎಂದು ಬಯಸುತ್ತವೆ. ಆದರೆ ಅವುಗಳು ಕೆಲವು ಕಾಯಿಲೆಗಳನ್ನು ಹರಡುತ್ತವೆ. ವೈರಲ್, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಹರಡುವಿಕೆಗೆ ಅವು ಕಾರಣವಾಗುತ್ತಿವೆ. ಅನೇಕ ಸಂಶೋಧನೆಗಳಿಂದ ಬ್ಯೂಟಿ ಸಲೂನ್ ಉತ್ಪನ್ನ ಮತ್ತು ಉಪಕರಣಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಪತ್ತೆ ಹಚ್ಚಿವೆ.
ಹೇರ್ ಡ್ರೆಸ್ಸಿಂಗ್, ನೇಲ್ ಕೇರ್, ವ್ಯಾಕ್ಸಿಂಗ್, ಥ್ರೆಡಿಂಗ್, ಮಣ್ಣಿನ ಸ್ನಾನ ಸೇರಿದಂತೆ ಹಲವಾರು ರೀತಿಯ ಸೌಂದರ್ಯ ವರ್ಧಕ ಸೇವೆಯನ್ನು ನೀಡುವ ಸಲೂನ್ ಅಥವಾ ಬ್ಯೂಟಿ ಪಾರ್ಲರ್‌ಗಳನ್ನು ಆರೋಗ್ಯ ಕಾಳಜಿ ಎಂದು ಪರಿಗಣಿಸಲಾಗಿದ್ದರೂ ಇವು ಹಲವು ರೀತಿಯ ವೈರಲ್, ಫಂಗಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಹರಡುವಿಕೆಗೆ ಕಾರಣವಾಗುತ್ತವೆ.
ಸೌಂದರ್ಯ ವರ್ಧನೆಗೆ ಉಪಯೋಗಿಸುವ ಪದಾರ್ಥಗಳು, ಉಪಕರಣಗಳಲ್ಲಿ ವಿವಿಧ ರೋಗಗಳ ಹರಡುವಿಕೆಗೆ ಕಾರಣವಾಗುತ್ತಿವೆ. ಹೆಚ್ಚಿನ ಸೌಂದರ್ಯ ಉತ್ಪನ್ನಗಳಲ್ಲಿ ಸಕ್ಕರೆ, ಪಿಷ್ಟ, ಪ್ರೊಟೀನ್, ಅಮೈನೋ ಆಮ್ಲ, ಸಾವಯವ ಆಮ್ಲ, ಆಮ್ಲ, ಕ್ಷಾರ, ಲವಣ, ಪ್ಯಾರಾಫಿನ್, ಕೊಬ್ಬಿನಾಮ್ಲ, ಆಲ್ಕೋಹಾಲ್, ಎಸ್ಟರ್‌ಗಳು, ಮಾಯಿಶ್ಚರೈಸರ್, ಬಣ್ಣ, ಸಂರಕ್ಷಕ, ಉತ್ಕರ್ಷಣ ನಿರೋಧಕ ಸುಗಂಧ ಮತ್ತು ಸಾರಭೂತ ತೈಲಗಳಿರುತ್ತವೆ. ಇವುಗಳಲ್ಲಿ ಹೆಚ್ಚಿನವು ನೀರಿನಲ್ಲಿ ಕರಗಬಲ್ಲವು. ಇದು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ. ಹೀಗಾಗಿ ಇದು ಸೋಂಕಿನ ಅಪಾಯವನ್ನು ಹೊಂದಿದೆ. ಹೀಗಾಗಿ ಇವುಗಳು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.
ಸಲೂನ್ ಅಥವಾ ಬ್ಯೂಟಿ ಪಾರ್ಲರ್‌ಗಳಲ್ಲಿ ಸಾಮಾನ್ಯವಾಗಿ ರಾಸಾಯನಿಕ ಕಾರಕಗಳು, ಕುದಿಯುವ ನೀರು, ಆಟೋಕ್ಲೇವಿಂಗ್, ಕ್ರಿಮಿನಾಶಕ, ಮತ್ತು ಯುವಿ ಬೆಳಕು ಮೊದಲಾದವುಗಳನ್ನು ಉಪಕರಣ ಸ್ವಚ್ಛಗೊಳಿಸಲು ಬಳಸುತ್ತವೆ. ಆದರೆ ಇದು ಎಲ್ಲ ರೀತಿಯ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲಲು ಸಾಕಾಗುವುದಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಪ್ರಸ್ತುತ, ಹೆಚ್ಚಿನ ಸಲೂನ್‌ಗಳು ಬಾರ್ಬಿಸೈಡ್ ದ್ರಾವಣವನ್ನು ಸೋಂಕು ನಿವಾರಕವಾಗಿ ಬಳಸಲಾಗುತ್ತಿದೆ. ಆದರೆ ಇದು ಹೆಚ್ಚು ವಿಷಕಾರಿಯಾಗಿದೆ.
ಏನೆಲ್ಲಾ ಅಪಾಯವಿದೆ?
ಕಾಸ್ಮೆಟಿಕ್ ಉತ್ಪನ್ನಗಳು ಮತ್ತು ಉಪಕರಣಗಳಿಂದ ವೈರಲ್, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಹರಡುವ ಸಾಧ್ಯತೆ ಇದೆ. ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಹೆಚ್ಚಿನ ಸೌಂದರ್ಯ ಉತ್ಪನ್ನಗಳ ಪದಾರ್ಥಗಳು ಸೂಕ್ಷ್ಮಜೀವಿಗಳ ವೃದ್ಧಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತವೆ. ಇವು ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಲವು ಸೌಂದರ್ಯವರ್ಧಕಗಳ ಮೇಲೆ ಉತ್ಪಾದನೆ ಮತ್ತು ಮುಕ್ತಾಯದ ದಿನಾಂಕಗಳನ್ನು ಹಾಕಲಾಗುವುದಿಲ್ಲ. ಹೀಗಾಗಿ ಅವುಗಳಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸಂಪೂರ್ಣವಾಗಿ ಸ್ವಚ್ಛತೆಯನ್ನು ಪಾಲಿಸಿಕೊಂಡು ಸೌಂದರ್ಯವರ್ಧಕಗಳನ್ನು ತಯಾರಿಸಲಾಗುವುದಿಲ್ಲ. ಇದರಿಂದಲೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ರೇಜರ್, ಕತ್ತರಿಗಳಂತಹ ಸಾಮಾನ್ಯ ಉಪಕರಣಗಳು ಚರ್ಮದ ಮೇಲೆ ಗಾಯವನ್ನು ಉಂಟು ಮಾಡಬಹುದು. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಸರಿಯಾಗಿ ಸ್ವಚ್ಛಗೊಳಿಸಲಾಗದ ಉಪಕರಣಗಳಿಂದ ರಕ್ತದಿಂದ ಹರಡುವ ರೋಗಗಳಾದ ಹೆಚ್ ಐವಿ ಸೋಂಕು, ಹೆಪಟೈಟಿಸ್ ಹರಡಲು ಕಾರಣವಾಗುತ್ತದೆ.
Snake bite: ಇನ್ನುಮುಂದೆ ಹಾವು ಕಡಿತ ಒಂದು ಕಾಯಿಲೆ; ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ಮೇಕ್ಅಪ್ ಬ್ರಷ್‌ಗಳು, ಸೌಂದರ್ಯವರ್ಧಕ ವಸ್ತುಗಳು ಸಂಪೂರ್ಣವಾಗಿ ಸೋಂಕುರಹಿತವಾದರೂ ಹೆಚ್ಚಾಗಿ ಅವುಗಳನ್ನು ಬಳಸುವುದರಿಂದ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ. ಇದು ಸೋಂಕಿನ ಅಪಾಯವನ್ನುಂಟು ಮಾಡುತ್ತವೆ. ಅಲ್ಲದೇ ಶಿಲಿಂಧ್ರ ಸೋಂಕು, ಚರ್ಮದ ಸೋಂಕು, ಕಂಜಕ್ಟಿವೈಟಿಸ್ ನಂತಹ ಅಪಾಯಗಳು ಹರಡುವ ಸಾಧ್ಯತೆ ಇದೆ.