Saturday, 25th May 2024

ಬಿಬಿಸಿಯ ಮೊದಲ ಹಿಂದಿ ವಾರ್ತಾ ವಾಚಕಿ ರಜನಿ ಕೌರ್ ಇನ್ನಿಲ್ಲ

ನವದೆಹಲಿ: ಹಿಂದೆ ಬಿಬಿಸಿಯಲ್ಲಿ ಹಿಂದಿ ವಾರ್ತೆಗಳನ್ನು ಓದುವ ಮೂಲಕ ಬಿಬಿಸಿಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ವಾರ್ತೆ ವಾಚಿಸಿದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ರಜನಿ ಕೌರ್​​ ಫರಿದಾಭಾದ್​ನಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಪೇಶಾವರದಲ್ಲಿ ಜನಿಸಿ ಪಾಕಿಸ್ತಾನದಲ್ಲಿ ನೆಲೆಸಿದ್ದ ರಜನಿ ದೆಹಲಿಯ ಆಲ್​ ಇಂಡಿಯಾ ರೇಡಿಯೋದಲ್ಲಿಯೂ ಕೆಲಸ ಮಾಡಿದ್ದರು. ಬಳಿಕ ವಾಷಿಂಗಟ್ನ್​ನ ವಾಯ್ಸ್​ ಆಫ್​ ಅಮೇರಿಕ ಹಾಗೂ ಲಂಡನ್​​ನಲ್ಲಿ ಬಿಬಿಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಿಬಿಸಿ ಹಿಂದಿ ಚಾನೆಲ್​ ಸೇರಿದ ಮೊದಲ ಮಹಿಳೆ ಹಾಗೂ ಬಿಬಿಸಿಯಲ್ಲಿ ಹಿಂದಿ ವಾರ್ತೆ ವಾಚಿಸಿದ ಮೊದಲ ಮಹಿಳೆ ಎಂಬ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರಜನಿ ಎಮಿನೆಂಟ್​ ಬ್ರಾಡ್​ಕಾಸ್ಟ್​ ಪತ್ರಕರ್ತ ದಿ.ಮಹೇಂದ್ರ ಕೌಲ್​ ಜೊತೆ ವಿವಾಹವಾಗಿದ್ದರು.

Leave a Reply

Your email address will not be published. Required fields are marked *

error: Content is protected !!