Thursday, 20th June 2024

iPhone 15 ಮಾರಾಟ ಆರಂಭ: ಐಫೋನ್​ ಖರೀದಿಗೆ ನೂಕುನುಗ್ಗಲು

ಮುಂಬೈ: ಮುಂಬೈನ BKC ಎದುರು ಗ್ರಾಹಕರು ಐಫೋನ್​ ಖರೀದಿಗೆ ಮುಗಿಬಿದ್ದಿದ್ದಾರೆ. iPhone 15 ಮಾರಾಟ ಆರಂಭವಾಗಿದ್ದು, ಮುಂಬೈನ ಬಿಕೆಸಿ ದೇಶದ ಮೊದಲ ಆಪಲ್-ಮಾಲೀಕತ್ವದ ಔಟ್‌ಲೆಟ್ ಆಗಿದ್ದು, ಇಲ್ಲಿ 100 ತಂಡದ ಸದಸ್ಯರಿದ್ದಾರೆ.

ಒಟ್ಟಾಗಿ 20 ಭಾಷೆಗಳನ್ನು ಮಾತನಾಡುವ ಚಾಕಚಕ್ಯತೆ ಈ ಸಿಬ್ಬಂದಿಗಳಲ್ಲಿದೆ ಎಂಬುದು ಮತ್ತೊಂದು ವಿಶೇಷ. ಮುಂಬೈನಲ್ಲಿ ಆಪಲ್ ಸ್ಟೋರ್‌ ಪ್ರಾರಂಭ ಆಗಿರುವುದರಿಂದ ದೇಶದಲ್ಲಿ ಕಂಪನಿಯ ಕಾರ್ಯಾಚರಣೆ ಗಳ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ.

ಇನ್ನು ಐಫೋನ್​ 15 ಸೀರಿಸ್ ಮಾರಾಟ ಆರಂಭವಾಗುವ ಮೊದಲೇ ಇದರ ಬೆಲೆಯಲ್ಲಿ ಭಾರೀ ರಿಯಾಯಿತಿ​ ಘೋಷಿಸಲಾಗಿದ್ದು, ಈ ಮೂಲಕ ಬಳಕೆದಾರರು 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಐಫೋನ್ 15 ಫೋನ್ ಖರೀದಿಸಬಹುದು.  ಪ್ರಿಬುಕಿಂಗ್‌ಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಐಫೋನ್ 15 ಖರೀದಿಸಲು ಅನೇಕರು ಆಸಕ್ತಿ ತೋರಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!