Wednesday, 19th June 2024

ನವೆಂಬರ್ 15 ರವರೆಗೆ ತ.ನಾಡಿನಲ್ಲಿ ಲಾಕ್ ಡೌನ್ ವಿಸ್ತರಣೆ

ತಮಿಳುನಾಡು: ತಮಿಳುನಾಡು ಸರ್ಕಾರ ಕೋವಿಡ್-19 ಲಾಕ್ ಡೌನ್ ಅನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಎಂ.ಕರುಣಾನಿಧಿ ಸ್ಟಾಲಿನ್ ಹೇಳಿದರು

ತಮಿಳುನಾಡಿನಲ್ಲಿ ಶನಿವಾರ 306 ಹೊಸ ಕೋವಿಡ್-19 ಪ್ರಕರಣಗಳು, 17 ಸಾವುಗಳು ಮತ್ತು 1,374 ಚೇತರಿಕೆಗಳು ವರದಿಯಾಗಿವೆ. ಈ ಮೂಲಕ ರಾಜ್ಯ ದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 13,280 ಕ್ಕೆ ಏರಿದೆ. ಈ ಹಿನ್ನೆಲೆ, ತಮಿಳುನಾಡು ಸರ್ಕಾರ ಕೋವಿಡ್-19 ಲಾಕ್ ಡೌನ್ ಅನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ.

ಎಲ್ಲಾ ಶಾಲಾ ತರಗತಿಗಳನ್ನು ಪರ್ಯಾಯ ದಿನದ ಆಧಾರದ ಮೇಲೆ ತೆರೆಯಲು ಮತ್ತು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು. ಸಿನೆಮಾ ಹಾಲ್ ಗಳು, ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯ ಮಂತ್ರಿ ಎಂ.ಕರುಣಾನಿಧಿ ಸ್ಟಾಲಿನ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!