Friday, 20th September 2024

ಮಣಿಪುರ ಹಿಂಸಾಚಾರ: ಸ್ವಾತಂತ್ರ್ಯ ಹೋರಾಟಗಾರರ ವೃದ್ಧ ಪತ್ನಿ ಸಜೀವ ದಹನ

ಇಂಫಾಲ: ಮಣಿಪುರ ಹಿಂಸಾಚಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೃದ್ಧ ಪತ್ನಿ ಯನ್ನು ಸಜೀವ ದಹನ ಮಾಡಿದ ಧಾರುಣ ಘಟನೆ ಕೂಡ ಬೆಳಕಿಗೆ ಬಂದಿದೆ.

ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದೆ ಎಂಬುದು ಇದೀಗ ಬಹಿರಂಗವಾಗಿದ್ದು, ಈ ಬಗ್ಗೆ ಸೆರೌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಫಾಲ್ನಿಂದ 45 ಕಿಮೀ ದೂರದಲ್ಲಿರುವ ಸೆರೌ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು 80 ವರ್ಷದ ಇಬೆತೊಂಬಿ ಮನೆಯೊಳಗೆ ಇದ್ದಾಗ ದಾಳಿಕೋರರು ಹೊರಗಿನಿಂದ ಬೀಗ ಹಾಕಿ ಆನಂತರ ಇಡೀ ಮನೆಗೆ ಬೆಂಕಿ ಹಚ್ಚಲಾಗಿದೆ. ಕುಟುಂಬ ದವರು ರಕ್ಷಿಸಲು ಬರುವಷ್ಟ ರಲ್ಲಿ ಬೆಂಕಿಯು ಸಂಪೂರ್ಣ ಮನೆಯನ್ನು ಆವರಿಸಿದ್ದು, ನಂತರ ಇಬೆಟೊಂಬಿಯು ಸಜೀವವಾಗಿ ಸುಟ್ಟು ಕರಕಲಾಗಿದ್ದರು ಎಂದು ಅವರು ಕುಟುಂಬದವರು ಹೇಳಿದ್ದಾರೆ.

ಈ ಮಹಿಳೆಯ ಪತಿ ಎಸ್ ಚುರಚಂದ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ವೃದ್ದೆಯ ಮೊಮ್ಮಗ ಪ್ರೇಮಕಾಂತ ಅವರು ಅವರು ದುಷ್ಕರ್ಮಿಗಳು ಅಜ್ಜಿ ಮನೆಗೆ ಬೆಂಕಿ ಹಚ್ಚಿದಾಗ ನಾವು ಅವರನ್ನು ರಕ್ಷಿಸಲು ಮುಂದಾದೆವು. ಆದರೆ ದುಷ್ಕರ್ಮಿಗಳು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು. ಕೂದಲೆಳೆ ಅಂತರದಲ್ಲಿ ನಾವು ಪ್ರಾಣಾ ಪಾಯದಿಂದ ಪಾರಾದೆವು. ಈ ವೇಳೆ ನನ್ನ ತೋಳು ಮತ್ತು ತೊಡೆಗೆ ಗುಂಡಿನ ಗಾಯವಾಗಿತ್ತು.