Friday, 13th December 2024

ರೇಷನ್ ಅಂಗಡಿಗಳಲ್ಲಿ ಎನ್ಎಫ್ಎಸ್ಎ ಲಾಂಛನದ ಫ್ಲೆಕ್ಸ್ ಗಳ ಪ್ರದರ್ಶನ ಮಾಡಿಲ್ಲ: ಕೇಂದ್ರಸರ್ಕಾರ ಗರಂ

ಕೋಲ್ಕತ್ತಾ: ರೇಷನ್ ಅಂಗಡಿಗಳಲ್ಲಿ ಪ್ರಧಾನಿ ಭಾವಚಿತ್ರ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಇರುವ ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡಿಲ್ಲ ಎಂಬ ಕಾರಣಕ್ಕೆ ಕೇಂದ್ರಸರ್ಕಾರವು ಪಶ್ಚಿಮ ಬಂಗಾಳಕ್ಕೆ ನೀಡಬೇಕಿದ್ದ ಸುಮಾರು 7 ಸಾವಿರ ಕೋಟಿ ರೂ ನಿಧಿಯನ್ನು ತಡೆ ಹಿಡಿದಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಹೊಂದಿರುವ ಫಲಕಗಳನ್ನು ಮತ್ತು ಫ್ಲೆಕ್ಸ್ಗಳನ್ನು ರಾಜ್ಯಾದ್ಯಂತ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪದೇ ಪದೇ ಜ್ಞಾಪನೆ ಮಾಡಿದರೂ ಇನ್ನೂ ಹಾಕಿಲ್ಲ. ಹೀಗಾಗಿ ಕೇಂದ್ರದ ಯೋಜನೆಗಳಿಗೆ ಭತ್ತ ಖರೀದಿಸಲು ರಾಜ್ಯ ಸರ್ಕಾರಕ್ಕೆ 7,000 ಕೋಟಿ ರೂಪಾಯಿ ಬಿಡುಗಡೆ ಮಾಡು ವುದನ್ನು ತಡೆಹಿಡಿಯಲು ಕೇಂದ್ರ ನಿರ್ಧರಿಸಿದೆ.

ಆದರೆ ಕೇಂದ್ರದ ಪರವಾಗಿ ಖರೀದಿಸಿದ ಭತ್ತಕ್ಕೆ ರಾಜ್ಯ ಸರ್ಕಾರ ಇನ್ನೂ ಮರುಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ.

ಎಲ್ಲಾ ಪಡಿತರ ಅಂಗಡಿಗಳಲ್ಲಿ ಮೋದಿಯವರ ಫೋಟೋಗಳು ಮತ್ತು ಎನ್ಎಫ್ಎಸ್ಎ ಲಾಂಛನವಿರುವ ಸೈನ್ ಬೋರ್ಡುಗಳು ಮತ್ತು ಫ್ಲೆಕ್ಸ್ಗಳನ್ನು ಹಾಕುವಂತೆ ಕೇಂದ್ರ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ರಾಜ್ಯ ಸರ್ಕಾರವನ್ನು ಕೇಳಿದೆ.