Wednesday, 24th April 2024

ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ

ಅಮರಾವತಿ: ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಪಾರ್ಟ್​ ಟೈಮ್​ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸುವ ಅವಕಾಶವಿದೆ ಎನ್ನುವ ಜಾಹೀರಾತುಗಳನ್ನು ನಿಜವೆಂದು ನಂಬಿ ಅನೇಕ ಖಾಸಗಿ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ವಂಚಕರ ಬಲೆಗೆ ಬೀಳುತ್ತಿದ್ದಾರೆ.

ವಿಜಯವಾಡ ನಗರದ ಸಾಫ್ಟ್‌ವೇರ್ ಇಂಜಿನಿಯರ್​ವೊಬ್ಬರು ಜಾಹೀರಾತು ನಂಬಿ ಅಪಾರ ಪ್ರಮಾಣದ ಹಣ ಕಳೆದುಕೊಂಡಿ ದ್ದಾರೆ. ಯುವತಿಯೊಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯ ಮೊಬೈಲ್‌ ಗೆ ಕಿರು ಸಂದೇಶ ಬಂದಿತ್ತು. “ನೀವು ಅರೆಕಾಲಿಕ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂದು ತಿಳಿಸಲಾಗಿತ್ತು. ​

ಯುವತಿ ಆ ನಂಬರ್‌ಗೆ ಕರೆ ಮಾಡಿದಾಗ, ಯೂಟ್ಯೂಬ್‌ನಲ್ಲಿನ ವಿಡಿಯೋ ಗಳನ್ನು ಲೈಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವು ದಾಗಿ ವಂಚಕರು ತಿಳಿಸಿದ್ದಾರೆ. ಇದನ್ನೇ ಸತ್ಯವೆಂದು ನಂಬಿ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದಾಳೆ.

ಬಳಿಕ ಮೂರು ವಿಡಿಯೋಗಳನ್ನು ಲೈಕ್ ಮಾಡಿದ್ದಕ್ಕೆ ಆಕೆಯ ಖಾತೆಗೆ 150 ರೂ. ಹಾಕಲಾಗಿದ್ದು, ಆರು ವಿಡಿಯೋಗಳನ್ನು ಲೈಕ್ ಮಾಡಿದಾಗ 300 ರೂ. ಜಮೆ ಆಗಿದೆ. ನೀವು ಪ್ರಿಪೇಯ್ಡ್ ಮಾಡಿದರೆ ಕೆಲಸ ಖಾಯಂ ಆಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ತಕ್ಷಣವೇ ಆಕೆ 1,000 ರೂ.ಗಳನ್ನು ಪಾವತಿಸಿದ್ದು, ಬಳಿಕ ಆಕೆಗೆ 1,600 ರೂ. ಬಂದಿದೆ. ನಂತರ ವಂಚಕರ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ 19 ಲಕ್ಷ ರೂ. ಪಾವತಿಸಿದ್ದು, ಹಣ ವಾಪಸ್​ ಬಾರದೇ ಇದ್ದಾಗ ಮೋಸ ಹೋಗಿರುವುದು ತಿಳಿದುಬಂದಿದೆ.

ಮತ್ತೆ ವಂಚಕರು ಯುವತಿಗೆ ಕರೆ ಮಾಡಿ 12,95,000 ರೂ.ಗಳನ್ನು ನೀಡುವಂತೆ ಒತ್ತಡ ಹೇರಿದ್ದಾರೆ. ಹಣ ಕೊಡದಿದ್ದರೆ ನೀವು ಮೊದಲು ನೀಡಿದ ಹಣ ವಾಪಸ್ ಬರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈಗಾಗಲೇ 19 ಲಕ್ಷ ರೂ. ಪಾವತಿಸಿ ವಂಚನೆ ಗೊಳಗಾಗಿದ್ದ ಯುವತಿ ಮತ್ತೆ ಪಾವತಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ. ನಂತರ, ಪೊಲೀಸರನ್ನು ಭೇಟಿ ಮಾಡಿ, ಈ ಕುರಿತು ದೂರು ದಾಖಲಿಸಿದ್ದಾರೆ.

error: Content is protected !!