ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ ಭಾರೀ ಪ್ರಮಾಣದ ಇಳಿಕೆ ಕಂಡಿದೆ.
ಸೆನ್ಸೆಕ್ಸ್ 937.66 ಪಾಯಿಂಟ್ ಗಳು ಕುಸಿದು, 47,409.93 ಪಾಯಿಂಟ್ ನೊಂದಿಗೆ ವಹಿವಾಟು ಕೊನೆಗೊಳಿಸಿದೆ. ನಿಫ್ಟಿ 50 ಸೂಚ್ಯಂಕವು 271.40 ಪಾಯಿಂಟ್ ಇಳಿಕೆ ಕಂಡು, 13967.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ವಹಿವಾಟಿನಲ್ಲಿ 1053 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1809 ಕಂಪೆನಿ ಷೇರುಗಳು ಇಳಿಕೆ ಕಂಡಿವೆ ಮತ್ತು 141 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.