Sunday, 1st December 2024

Vatu Tips: ಶಿವನಿಗೆ ಪ್ರಿಯವಾದ ಎಕ್ಕದ ಗಿಡ ಮನೆಯ ಮುಂದೆ ಬೆಳೆದರೆ ಏನಾಗುತ್ತದೆ ನೋಡಿ!

Vatu Tips

ಶಿವನಿಗೆ ಪ್ರಿಯವಾದ ಎಕ್ಕದ ಹೂವು, ಗಿಡವನ್ನು (Madar Tree) ಬಹುತೇಕ ಎಲ್ಲರೂ ನೋಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಅಪರೂಪವಾಗಿ ಕಾಣಸಿಗುತ್ತಿದೆ. ಆದರೆ ಬಾಲ್ಯದಲ್ಲಂತೂ ಈ ಗಿಡವನ್ನು ನೋಡಿರುತ್ತೇವೆ ಅದರಲ್ಲಿ ಆಟವಾಡಿರುತ್ತೇವೆ. ಕೆಲವೊಮ್ಮೆ ಇದು ಮನೆ ಮುಂದೆಯೂ (vastu for home) ಬೆಳೆಯುತ್ತದೆ. ಆದರೆ ಇದನ್ನು ತೆಗೆಯುವುದೇ, ಬಿಡುವುದೇ ಎನ್ನುವ ಚಿಂತೆ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ವಾಸ್ತು ನಿಯಮ (Vatu Tips) ಏನು ಹೇಳುತ್ತದೆ ನೋಡೋಣ.

ಎಕ್ಕದ ಗಿಡವು ಭಾರತದ ಪ್ರಸಿದ್ಧ ಔಷಧೀಯ ಸಸ್ಯವಾಗಿದೆ. ಆದರೆ ಇದರಲ್ಲಿ ಬರುವ ಬಿಳಿ ಹಾಲಿನಿಂದಾಗಿ ಈ ಸಸ್ಯವನ್ನು ವಿಷಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಹೆಚ್ಚಿನವರು ಇದರಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಈ ಸಸ್ಯವು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ಸಸ್ಯ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಯಾರೂ ಅದನ್ನು ಬೆಳೆಯುವುದಿಲ್ಲ. ಅದು ತನ್ನಷ್ಟಕ್ಕೇ ತಾನಾಗಿ ಬೆಳೆಯುತ್ತದೆ. ಇದು ವಿಷಕಾರಿಯಾಗಿರುವುದರಿಂದ ಯಾವ ಪ್ರಾಣಿಗಳೂ ತಿನ್ನುವುದಿಲ್ಲ ಆದರೆ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ಗುಣ ಹೊಂದಿದೆ. ಪೈಲ್ಸ್, ಉರಿಯೂತ, ಉಬ್ಬಸ, ಕಾಲರಾ ರೋಗಕ್ಕೂ ಇದನ್ನು ಔಷಧವಾಗಿ ಬಳಸಲಾಗುತ್ತದೆ. ಇಷ್ಟೆಲ್ಲ ಪ್ರಯೋಜನವಿರುವ ಈ ಗಿಡದ ಬಗ್ಗೆ ವಾಸ್ತು ನಿಯಮ ಏನು ಹೇಳುತ್ತದೆ?

ಮನೆ ಸುತ್ತಮುತ್ತಲಿನ ಸಸ್ಯಗಳು ಮನೆಯ ಶಕ್ತಿಯ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಕೆಲವೊಂದು ಸಸ್ಯಗಳು ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಧನಾತ್ಮಕ ಫಲಿತಾಂಶಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

Vatu Tips

ಎಕ್ಕದ ಗಿಡ, ಮದರ್ ಗಿಡ ಎಂದು ಕರೆಲ್ಪಡುವ ಸಸ್ಯವು ಹಿಂದೂ ಧರ್ಮದಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿದೆ. ಯಾಕೆಂದರೆ ಇದು ಶಿವನೊಂದಿಗೆ ಸಂಬಂಧ ಹೊಂದಿದೆ. ಭಕ್ತರು ಶಿವನ ಪೂಜೆಗೆ ಈ ಹೂವನ್ನು ಬಳಸುತ್ತಾರೆ.
ಅರ್ಕಾ, ಅಕನ್ ಮತ್ತು ಆಕ್ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಗಿಡವು ದುಷ್ಟ ಶಕ್ತಿಗಳನ್ನು ದೂರವಿಡುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ ಎನ್ನಲಾಗುತ್ತದೆ.

ಮನೆ ಮುಂದೆ ಈ ಗಿಡ ಇರಬಹುದೇ?

ವಾಸ್ತು ತಜ್ಞರಾದ ಪಂಡಿತ್ ಅರವಿಂದ್ ತ್ರಿಪಾಠಿ ಅವರು ಈ ಗಿಡವನ್ನು ಅಪ್ಪಿತಪ್ಪಿಯೂ ಮನೆ ಮುಂದೆ ಇರಿಸಬೇಡಿ ಎಂದಿದ್ದಾರೆ. ಈ ಗಿಡ ಮಂಗಳಕರವಾಗಿದ್ದರೂ ಮನೆ ಮುಂದೆ ಇಟ್ಟರೆ ಅದು ಅಶುಭ ಫಲವನ್ನು ಕೊಡಬಹುದು. ಜೀವನದಲ್ಲಿ ವೈಫಲ್ಯಗಳನ್ನು ಎದುರಿಸಬೇಕಾಗಬಹುದು.

ಈ ಗಿಡ ನಕಾರಾತ್ಮಕತೆಯೊಂದಿಗೆ ಸಂಬಂಧಿಸಿದೆ. ಮನೆಯ ಮುಂದೆ ಈ ಗಿಡ ನೆಡುವುದರಿಂದ ಮನೆಯಲ್ಲಿ ಎಂದಿಗೂ ಶಾಂತಿ ಮತ್ತು ಸಂತೋಷ ಇರುವುದಿಲ್ಲ.

Vastu Tips: ಸ್ನಾನ ಗೃಹದಲ್ಲಿ ಈ ಎಂಟು ತಪ್ಪುಗಳನ್ನು ಮಾಡಬೇಡಿ

ಯಶಸ್ಸನ್ನು ಸಾಧಿಸುವುದು ಕಷ್ಟವಾಗುತ್ತದೆ. ಅಲ್ಲದೇ ಕುಟುಂಬದಲ್ಲಿ ಘರ್ಷಣೆ ಮತ್ತು ಕಲಹದ ಪರಿಸ್ಥಿತಿ ಉಂಟಾಗಬಹುದು. ಮನೆಯಲ್ಲಿ ರೋಗ ರುಜಿನಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಅಪಘಾತಗಳ ಸಾಧ್ಯತೆಯಿದೆ ಎನ್ನುತ್ತಾರೆ ಅರವಿಂದ್ ತ್ರಿಪಾಠಿ.