ಮೀರತ್: ನಿದ್ರೆಗೆ ತೊಂದರೆ ಉಂಟು ಮಾಡಿದ ಐದು ನಾಯಿ ಮರಿಗಳನ್ನು (Puppies) ಇಬ್ಬರು ಮಹಿಳೆಯರು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ (Crime News) ಮೀರತ್‌ನ (Meerut) ಕಂಕೇರಖೇಡಾ ಪ್ರದೇಶದಲ್ಲಿ ನಡೆದಿದೆ(Viral News). ಅನಿಮಲ್ ಕೇರ್ ಸೊಸೈಟಿಯ (Animal Care Society) ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ್ ನೀಡಿದ ಹೇಳಿಕೆಯನ್ನು ಆಧರಿಸಿ ಈ ಕುರಿತು ಪ್ರಕರಣ ದಾಖಲಿಸಿರುವುದಾಗಿ ಠಾಣಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಏನಿದು ಘಟನೆ?
ಮೀರತ್‌ನ ಕಂಕೇರಖೇಡಾ ಪ್ರದೇಶದ ಇಬ್ಬರು ಮಹಿಳೆಯರು ನಾಯಿ ಮರಿಗಳ ಶಬ್ದದಿಂದ ಹತಾಶರಾಗಿದ್ದು, ಹೀಗಾಗಿ ಬೀದಿ ಬೀದಿ ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದಾರೆ. ಕಂಕೇರಖೇಡ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳಾದ ಶೋಭಾ ಮತ್ತು ಆರತಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 325 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
#watch थाना कंकरखेड़ा क्षेत्र अंतर्गत दो महिलाओं द्वारा 05 पिल्लों को कोई ज्वलनशील पदार्थ डालकर जलाकर मारने पर दोनों महिलाओं के खिलाफ मुकदमा दर्ज, आयुष विक्रम सिंह, एसपी सिटी मेरठ pic.twitter.com/1i9K5K0BNw
— TV MEERUT NEWS (@TvMeerut) November 9, 2024
ತನಿಖೆಯ ಅನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ತಿಳಿಸಿದರು.
ದೂರಿನ ಪ್ರಕಾರ, ರೋಹ್ಟಾ ರಸ್ತೆಯ ಸಂತ ನಗರ ಕಾಲೋನಿಯಲ್ಲಿ ನವೆಂಬರ್ 5 ರಂದು ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಬೀದಿ ನಾಯಿಯೊಂದು ಐದು ನಾಯಿ ಮರಿಗಳಿಗೆ ಜನ್ಮ ನೀಡಿತ್ತು ಎನ್ನಲಾಗಿದೆ. ಆರೋಪಿ ಮಹಿಳೆಯರು ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಅಂಶುಮಾಲಿ ವಶಿಷ್ಠ್ ದೂರಿನಲ್ಲಿ ತಿಳಿಸಿದ್ದಾರೆ.
ಮೀರತ್ ವ್ಯಾಪಾರ ಮಂಡಲದ ಪ್ರತಿನಿಧಿಗಳು ಸರ್ಕಲ್ ಆಫೀಸರ್ (ಸಿಒ) ದೌರಾಲಾ ಶುಚಿತಾ ಸಿಂಗ್ ಅವರನ್ನು ಶುಕ್ರವಾರ ಭೇಟಿಯಾಗಿ ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಅಲ್ಲದೇ ಮಹಿಳೆಯರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.