ನವದೆಹಲಿ : ಸೋಶಿಯಲ್ ಮೀಡಿಯಾಗಳಲ್ಲಿ ದೆವ್ವದಂತೆ ನಟಿಸುತ್ತಾ ಪ್ರ್ಯಾಂಕ್ ಮಾಡುವಂತಹ ವಿಡಿಯೊಗಳು ಆಗಾಗ ಹರಿದಾಡುತ್ತಿರುತ್ತದೆ. ಇದನ್ನು ಜನರು ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಇದು ತುಂಬಾ ತಮಾಷೆಯಾಗಿರುತ್ತದೆ. ಇತ್ತೀಚೆಗೆ ದೆಹಲಿ ಮೂಲದ ಮಹಿಳೆಯೊಬ್ಬರು ಹ್ಯಾಲೋವೀನ್ ಮೇಕಪ್ ಮಾಡಿಕೊಂಡು ಮಕ್ಕಳು ಮತ್ತು ಜನರನ್ನು ಹೆದರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಪಶ್ಚಿಮ ವಿಹಾರ್‌ನ ಮೇಕಪ್ ಕಲಾವಿದೆ ಶೈಫಾಲಿ ನಾಗ್ಪಾಲ್ ತಮ್ಮ ಹ್ಯಾಲೋವೀನ್ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ ಏಳು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೊದಲ್ಲಿ ರಕ್ತ ಚೆಲ್ಲಿದ ಸ್ಲೀವ್ ಲೆಸ್ ಬಿಳಿ ಉಡುಪನ್ನು ಧರಿಸಿ ಮತ್ತು ವಿಚಿತ್ರ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಿಕೊಂಡು ನಾಗ್ಪಾಲ್ ಸ್ಥಳೀಯ ಉದ್ಯಾನವನಕ್ಕೆ ಹೋಗಿದ್ದಾರೆ. ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಅವರನ್ನು ಕಂಡು ಭಯಭೀತರಾಗಿ ಓಡಿಹೋಗಿದ್ದಾರೆ. ನಂತರ, ಅವರು ಹತ್ತಿರದ ಬೀದಿಯಲ್ಲಿ ನಡೆದುಕೊಂಡು ಹೋಗಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.
ಶೈಫಾಲಿ ನಾಗ್ಪಾಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದ ಬಳಕೆದಾರರಲ್ಲಿ ಕೆಲವರು ಇದನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ಇಂತಹ ಕೆಲಸ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ಕೆಲವು ಬಳಕೆದಾರರು ಮಕ್ಕಳ ಮೇಲೆ ಅಂತಹ ತಮಾಷೆಯನ್ನು ಮಾಡಬಾರದಿತ್ತು ಎಂದು ಹೇಳಿದರು. ಇನ್ನೂ ಕೆಲವರು ಅವರ ಹ್ಯಾಲೋವೀನ್ ಮೇಕಪ್ ಅನ್ನು “ಅತ್ಯುತ್ತಮ” ಎಂದು ಹೊಗಳಿದ್ದಾರೆ.
ಈ ಹಿಂದೆ ಕೂಡ ದೆಹಲಿಯ ಮಹಿಳೆಯೊಬ್ಬರು ದೆವ್ವ ಸನ್ಯಾಸಿನಿಯ ವೇಷದಲ್ಲಿ ರಾತ್ರಿಯಲ್ಲಿ ಬೀದಿಗಳಲ್ಲಿ ತಿರುಗಾಡಿದ್ದಾರೆ. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.