ಕುಡಿದ ಅಮಲಿನಲ್ಲಿ ಪೊಲೀಸ್ ಅಧಿಕಾರಿ (drunk head constable) ಮತ್ತು ಆಟೋ ಚಾಲಕ (auto driver) ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ (Uttar Pradesh’s Bareilly) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಕುಡಿದ ಅಮಲಿನಲ್ಲಿದ್ದ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಆಟೋ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ದು, ಇದು ಹೊಡೆದಾಟಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಕೋಲು ಮತ್ತು ಕುರ್ಚಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋವನ್ನು ಸುತ್ತಮುತ್ತ ನೆರೆದಿದ್ದವರು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಬರೇಲಿಯಲ್ಲಿ ಪಾನಮತ್ತ ಹೆಡ್ ಕಾನ್ಸ್ಟೆಬಲ್ ಮತ್ತು ಆಟೋ ಚಾಲಕನ ನಡುವೆ ಜಗಳ ನಡೆದಿದೆ. ಇವರಿಬ್ಬರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ.
#Bareilly
— बरेली तक (@Rajthak10917028) October 5, 2024
शराब के नशे में हेडकांस्टेबल ने की मारपीट
जमकर चले लात घुसे थप्पड़ डंडे और कुर्सियां
मारपीट का
🔸वीडियो सोशल मीडिया में हुआ वायरल
🔸इंस्पेक्टर भमोरा ने दोनो के खिलाफ दर्ज की एफआईआर
भमोरा थाना क्षेत्र के देवचरा चौराहे का मामला @bareillypolice @Uppolice @dgpup pic.twitter.com/oesG1NBeoh
ರಸ್ತೆಯಲ್ಲಿ ವಾಹನ ಸಾಗಾಟಕ್ಕೆ ಅಡ್ಡಿಪಡಿಸುತ್ತಿದ್ದ ಆಟೋ ಚಾಲಕ ಕಿಶನ್ ಪ್ರತಾಪ್ ಸಿಂಗ್ ನೊಂದಿಗೆ ಭಮೌರಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಮಿತ್ ಸಿಂಗ್ ಜಗಳವಾಡಿಕೊಂಡಿದ್ದು ಕುರ್ಚಿ, ಕೋಲಿನಿಂದ ಹೊಡೆದಾಡಿಕೊಂಡಿದ್ದಾರೆ.
ಇವರಿಬ್ಬರ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ಬರೇಲಿ ಎಸ್ಎಸ್ಪಿ ಅನುರಾಗ್ ಆರ್ಯ ಅವರು ಕಾನ್ಸ್ಟೆಬಲ್ನನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
Zakir Naik: ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆ ಬಿಟ್ಟು ಹೊರ ನಡೆದ ಝಾಕಿರ್ ನಾಯ್ಕ್; ಕಾರಣ ಕೇಳಿದರೆ ದಂಗಾಗುತ್ತೀರಿ
ಅಲ್ಲದೇ ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸ್ ಅಧಿಕಾರಿಯು ಪಾನಮತ್ತನಾಗಿರುವುದಾಗಿ ತಿಳಿದು ಬಂದಿದ್ದು, ಅಧಿಕಾರಿಯ ಮಾದಕ ವ್ಯಸನ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ಕಾರಣ ಶೀಘ್ರ ಕ್ರಮ ಕೈಗೊಳ್ಳುವಂತೆ ಎಸ್ಎಸ್ಪಿ ಆರ್ಯ ಆದೇಶಿಸಿದ್ದಾರೆ.