ನವದೆಹಲಿ: ದೆಹಲಿ ಮೆಟ್ರೋ ಒಂದಿಲ್ಲೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತದೆ. ಈ ಹಿಂದೆ ಕೆಲವು ಪ್ರಯಾಣಿಕರು ರೀಲ್ಸ್‌ಗಾಗಿ ಹಾಡುವುದು,ಡ್ಯಾನ್ಸ್ ಮಾಡುವುದು, ಸ್ಟಂಟ್ ಮಾಡುವುದು ಹೀಗೆ ಏನೇನೋ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಇದೀಗ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಂದೆ-ಮಗ ತಳ್ಳಿದ್ದಾರೆ ಎಂದು ಆರೋಪಿಸಿ ಅವರನ್ನೂ ಆಕೆ ತಳ್ಳಿದ ಘಟನೆ ನಡೆದಿದೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ರೈಲಿನಲ್ಲಿದ್ದ ತಂದೆ-ಮಗ ತನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿ ತೀವ್ರ ವಾಗ್ವಾದ ನಡೆಸಿದ್ದಾರೆ. ಮೂವರು ಸೇರಿ ಕೈಕೈ ಮಿಲಾಯಿಸಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಕೂಡ ಮಹಿಳೆ ಆಕ್ರೋಶಗೊಂಡು ಅವರನ್ನು ಬಲವಂತವಾಗಿ ತಳ್ಳಿ ರೈಲಿನಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾಳೆ.
Kalesh inside Delhi metro over push and shove
— Ghar Ke Kalesh (@gharkekalesh) November 6, 2024
pic.twitter.com/QU3V9HaKUt
ಈ ವಿಡಿಯೊ ಘರ್ ಕೆ ಕಾಲೇಶ್ ಎಂಬ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದಕ್ಕೆ ಕಾಮೆಂಟ್ ಮಾಡಿ ಪ್ರಯಾಣಿಕರ ಅಶಿಸ್ತು ಮತ್ತು ಅಸಾಮಾನ್ಯ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರು ಜಗಳವಾಡಿದ್ದು ಇದೇ ಮೊದಲಲ್ಲಾ. ಇದಕ್ಕೂ ಮೊದಲು ಮೇ ತಿಂಗಳಿನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ದೆಹಲಿ ಮೆಟ್ರೋದೊಳಗೆ ಜಗಳದಲ್ಲಿ ತೊಡಗಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಮೆಟ್ರೋ ಒಳಗೆ ಇಬ್ಬರು ಮಹಿಳೆಯರು ಕೈಕೈ ಮಿಲಾಯಿಸಿಕೊಂಡು ಜಗಳವಾಡಿದ್ದಾರೆ. ಸಹ ಪ್ರಯಾಣಿಕರು ಸುತ್ತುವರಿದು ಜಗಳ ನಿಲ್ಲಿಸಲಿಲ್ಲವಂತೆ.
ಇದನ್ನೂ ಓದಿ:ಪ್ಯಾರಾಗ್ಲೈಡಿಂಗ್, ಸ್ಪೀಡ್ ಫ್ಲೈ ಮಾಡೋ ಮುನ್ನ ಎಚ್ಚರ… ಎಚ್ಚರ! ಈ ಶಾಕಿಂಗ್ ವಿಡಿಯೋ ನೋಡಿದ್ರೆ ಮೈ ನಡುಗುತ್ತೆ
ಹಾಗೇ ಆಗಸ್ಟ್‌ನಲ್ಲಿ ಕೂಡ ಇಬ್ಬರು ಪ್ರಯಾಣಿಕರು ಜನದಟ್ಟಣೆಯಿಂದ ತುಂಬಿದ ಮೆಟ್ರೋದಲ್ಲಿ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳವಾಡಿದ್ದಾರೆ. ಇದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಆಗಿದೆ.