Saturday, 14th December 2024

ಅಂತರರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರದ ಮೊದಲ ಹಂತಕ್ಕೆ ಚಾಲನೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ದೆಹಲಿಯ ದ್ವಾರಕಾದಲ್ಲಿ ಅಂತರರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರದ (ಐಐಸಿಸಿ) ಮೊದಲ ಹಂತಕ್ಕೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ಯಶೋಭೂಮಿ ಉದ್ಘಾಟಿಸಿದ ನಂತರ ಸಮಾವೇಶ ಕೇಂದ್ರದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಪ್ರತಿಧ್ವನಿಸಿದವು.ಕನ್ವೆನ್ಷನ್ ಸೆಂಟರ್ಗೆ ಹೋಗುವಾಗ ಪಿಎಂ ಮೋದಿ ಮೆಟ್ರೋ ಪ್ರಯಾಣ ಮಾಡಿದರು. ಈ ವೇಳೆ ಮಕ್ಕಳು, ಪ್ರಯಾಣಿಕರ ಜೊತೆ ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿದರು.

ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣದ ಉದ್ಘಾಟನೆಯೊಂದಿಗೆ ಯಶೋಭೂಮಿಯನ್ನು ದೆಹಲಿ ವಿಮಾನ ನಿಲ್ದಾಣ ಮೆಟ್ರೋ ಎಕ್ಸ್ ಪ್ರೆಸ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ.

ಯಶೋಭೂಮಿ ಸಂಕೀರ್ಣದಲ್ಲಿರುವ ಪ್ರಮುಖ ಆಡಿಟೋರಿಯಂ ಅಥವಾ ಸಭಾಂಗಣವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಶಬ್ದದ ನಿರ್ವಹಣೆ ಉತ್ತಮವಾಗಿರುವಂತೆ ನಿರ್ಮಿಸಲಾಗಿದೆ. ವಿಶ್ವದರ್ಜೆ ಮಟ್ಟದ ಆಡಿಟೋರಿಯಂ ಇದಾಗಿದೆ.

ಯಶೋಭೂಮಿಯಲ್ಲಿ ಪರಿಸರಸ್ನೇಹಿ ಎನಿಸುವ ಹಲವು ಫೀಚರ್ಗಳಿವೆ. ತ್ಯಾಜ್ಯನೀರು ನಿರ್ವಹಣೆ ವ್ಯವಸ್ಥೆ ಇದೆ. ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಮೇಲ್ಚಾವಣಿ ಸೌರ ಫಲಕಗಳಿವೆ.

ಮುಖ್ಯ ಸಭಾಂಗಣವು ಸಮಾವೇಶ ಕೇಂದ್ರದ ಸಂಪೂರ್ಣ ಸಭಾಂಗಣವಾಗಿದ್ದು, ಸುಮಾರು 6,000 ಅತಿಥಿಗಳ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ನವೀನ ಸ್ವಯಂಚಾಲಿತ ಆಸನ ವ್ಯವಸ್ಥೆಯನ್ನು ಹೊಂದಿದೆ.

ಯಶೋಭೂಮಿ 1.07 ಲಕ್ಷ ಚದರ ಮೀಟರ್ ವಿಸ್ತೀರ್ಣದ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣಗಳಲ್ಲಿ ಒಂದಾಗಿದೆ.