Saturday, 27th July 2024

ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ ಎಂ.ಎಸ್.ಉಮಾ ಶಂಕರ್ ನೇಮಕ

ಮಂಗಳೂರು: ಆರ್‌ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡ ಲಾಗಿದ್ದು, ನವೆಂಬರ್ 1 ರಿಂದ ಅವರು ಈ ಹುದ್ದೆಯನ್ನಲಂಕರಿಸ ಲಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಎಂ.ಎಸ್. ಉಮಾ ಶಂಕರ್. ಅವರು ಆರ್‌ಬಿಐ ನಲ್ಲಿ 37 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಪ್ರಮುಖ ಹುದ್ದೆ ಆರ್ಥಿಕ ವಲಯದ ಮೇಲ್ವಿಚಾ ರಣೆಯ ಕ್ಷೇತ್ರದಲ್ಲಿತ್ತು. ಕರೆನ್ಸಿ ನಿರ್ವಹಣೆ, ವಿದೇಶಿ ವಿನಿಮಯ ಮತ್ತು ಆಂತರಿಕ ಲೆಕ್ಕಪತ್ರ ನಿರ್ವಹಣೆ ಮತ್ತು ಆಡಳಿತದ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದರು.

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ, ಅವರು ನೇರ ನೇಮಕಾತಿ ಅಧಿಕಾರಿಯಾಗಿ ಆರ್‌ಬಿಐಗೆ ಸೇರಿ ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ (ಸಿಎಐಐಬಿ) ಯ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ ಮತ್ತು ನ್ಯೂಯಾರ್ಕ್ನ ಕೊಲಂಬಿ ಯಾ ಬ್ಯುಸಿನೆಸ್ ಶಾಲೆಯಲ್ಲಿ ಕಾರ್ಯನಿರ್ವಾಹಕ ಶಿಕ್ಷಣ ಪಡೆದಿದ್ದಾರೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳ ಮಂಡಳಿಗಳಲ್ಲಿ ಆರ್‌ಬಿಐ ನಾಮಿನಿಯಾಗಿ ಸಹ ಉಮಾ ಶಂಕರ್ ಸೇವೆ ಸಲ್ಲಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ ಇ ಒ ಎಂ ಎಸ್ ಮಹಾಬಲೇಶ್ವರ, ಮಾತನಾಡಿ ಉಮಾ ಅವರೊಂದಿಗೆ ಹನ್ನೊಂದು ನಿರ್ದೇಶಕರಲ್ಲಿ ಎಂಟು ಮಂದಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ ಮತ್ತು ಬ್ಯಾಂಕ್ ಮಂಡಳಿಯಲ್ಲಿ ಇಬ್ಬರು ಮಹಿಳೆ ಯರು ಇರಲಿದ್ದಾರೆ” ಎಂದರು.

Leave a Reply

Your email address will not be published. Required fields are marked *

error: Content is protected !!