Saturday, 23rd November 2024

Arrest: ವಸತಿ ಶಾಲೆಯ ಶಿಕ್ಷಕನ ಮೊಬೈಲಿ​ನಲ್ಲಿ ಐದು ಸಾವಿರ ನಗ್ನ ಫೋಟೋ, ವಿಡಿಯೋಗಳು ಪತ್ತೆ

ಮಾಲೂರು: ಕೋಲಾರ(Kolar) ಜಿಲ್ಲೆ ಮಾಲೂರು(Malur) ತಾಲೂಕಿನ ಮಾಸ್ತಿ ಗಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ(Morarji Desai Residential School) ಯ ಶಿಕ್ಷಕ ಮುನಿಯಪ್ಪನ ಮೊಬೈಲ್​ನಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಸುಮಾರು ಐದು ಸಾವಿರ ನಗ್ನ ಫೋಟೋ (Naked Image)ಮತ್ತು ವಿಡಿಯೋಗಳು ಪತ್ತೆಯಾಗಿವೆ.

ಕಳೆದ ವರ್ಷ ಜಿಲ್ಲೆಯ ವಸತಿ ಶಾಲೆಯೊಂದಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಗುಂಡಿ ಸ್ವಚ್ಛಗೊಳಿಸಿ ವಿವಾದ ಕ್ಕೀಡಾಗಿದ್ದ ಪ್ರಕರಣ ದೊಡ್ಡ ಸದ್ದು ಮಾಡಿತ್ತು. ಅದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸು ತ್ತಿರುವ ಮುನಿಯಪ್ಪ ಅದೇ ಶಾಲೆಯ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಫೋಟೋ ಮತ್ತು ವಿಡಿಯೋಗಳನ್ನು ಗೊತ್ತಿಲ್ಲದಂತೆ ಶೂಟ್‌ ಮಾಡಿ ಇಟ್ಟುಕೊಂಡಿದ್ದಾನೆ ಎಂದು ವರದಿಯಾಗಿದೆ.

ತನಿಖಾಧಿಕಾರಿಗಳು ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆ ಸಂದರ್ಭದಲ್ಲಿ, ಅಲ್ಲಿದ್ದ ಎಲ್ಲ ಶಿಕ್ಷಕರ ಮೊಬೈಲ್‌ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಮುನಿಯಪ್ಪನವರ ಮೊಬೈಲ್ ಕೂಡ ವಶಕ್ಕೆ ಸಿಕ್ಕಿತ್ತು. ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿರುವ ದತ್ತಾಂಶಗಳನ್ನು ಪರಿಶೀಲಿಸುವಾಗ ಮುನಿಯಪ್ಪನವರ ಮೊಬೈಲ್‌ನಲ್ಲಿ ಬಾಲಕಿಯರ ನಗ್ನ ಫೋಟೋಗಳು, ಬಟ್ಟೆ ಬದಲಿಸುವಾಗ ತೆಗೆದಿರಬಹುದಾದ ಫೋಟೋಗಳು ಸಿಕ್ಕಿವೆ. ಇಂಥದ್ದೇ ಕೆಲವು ವಿಡಿಯೋ ಗಳೂ ಕೂಡ ಸಿಕ್ಕಿವೆ.

ಪ್ರಕರಣದ ಗಾಂಭೀರ್ಯತೆ ಅರಿತ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಮುನಿಯಪ್ಪನವರನ್ನು ಬಂಧಿಸಿದ್ದರು. ತಮ್ಮ ಬಂಧನದ ವಿರುದ್ಧ ಕೆಳ ಹಂತದ ನ್ಯಾಯಲಯದ ಮೊರೆ ಹೋಗಿದ್ದ. ಅಲ್ಲಿ ಆತನಿಗೆ ವ್ಯತಿರಿಕ್ತ ತೀರ್ಪು ಬಂದಿತ್ತು. ತನ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಶಿಕ್ಷಕ ತನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದ. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿದೆ.

ತನ್ನ ಮೊಬೈಲ್‌ನಲ್ಲಿ ಹೆಣ್ಣು ಮಕ್ಕಳ 5000ಕ್ಕೂ ಹೆಚ್ಚು ನಗ್ನ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡಿರು ವುದು ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಿಕ್ಷಕ ಮುನಿಯಪ್ಪನಿಗೆ ಹೈಕೋರ್ಟ್‌ ಈ ಮೂಲಕ ಚಾಟಿ ಬೀಸಿದೆ.

“ಬಾಲಕಿಯರ ಅಂಗಾಂಗಗಳ ಫೋಟೋ ಅಥವಾ ವಿಡಿಯೋಗಳನ್ನು ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿರುವ ಮುನಿಯಪ್ಪನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ ನಗ್ನ ಫೋಟೋಗಳು ಬಂದಿದ್ದಾದರೂ ಹೇಗೆ, ಆ ವಿಡಿಯೋ ಹಾಗೂ ಚಿತ್ರಗಳು ಯಾವುವು ಎಂಬುದು ಸೂಕ್ತ ತನಿಖೆಯಿಂದ ಬಹಿರಂಗವಾಗಬೇಕಿದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.

2023 ಡಿಸೆಂಬರ್ 17ರಂದು ವಿದ್ಯಾರ್ಥಿಗಳು ಶೌಚಗುಂಡಿ ಸ್ವಚ್ಛಗೊಳಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು.