Wednesday, 19th June 2024

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ 5 ಲಕ್ಷ ರೂ. ಚೆಕ್ ಸಮರ್ಪಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪಾಲಿಕೆ ಅಧಿಕಾರಿ ಮತ್ತು ನೌಕರರಿಂದ ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿಮಾರ್ಣಕ್ಕೆ ಸಂಗ್ರಹಿಸಿದ 5 ಲಕ್ಷ ರೂ. ಮೊತ್ತ ವನ್ನು ಪಾಲಿಕೆ‌ ಕೇಂದ್ರ ಕಛೇರಿಯ ಅನೆಕ್ಸ್‌ ಕಟ್ಟಡ ದಲ್ಲಿರುವ ಸಂಘದ ಮೊದಲನೆ ಮಹಡಿಯ “ವಿವೇಕಾ ನಂದ ಸಭಾಂಗಣ”ದಲ್ಲಿ ಮಾನ್ಯ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡರಿಗೆ ಆಡಳಿತಗಾರ ಗೌರವ್ ಗುಪ್ತಾ ಮತ್ತು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮುಖಾಂತರ ಸಮರ್ಪಿಸಲಾಯಿತು.

ಈ ವೇಳೆ ಮಾನ್ಯ ಮಾಜಿ ಉಪಮಹಾಪೌರರು ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರು ಎನ್.ಆರ್. ರಮೇಶ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು ಅಮೃತ್ ರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ರಾಮಜನ್ಮಭೂಮಿ ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿಮಾರ್ಣಕ್ಕೆ ಪಾಲಿಕೆಯ ನೌಕರರ ಕ್ಷೇಮಾಭಿವೃದ್ಧಿ ಸಂಘವು ಅಧಿಕಾರಿ ನೌಕರರು ಶ್ರಮದಿಂದ ದುಡಿದ ಹಣವನ್ನು ಸಂಗ್ರಹಿಸಿ ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದು ಸಂತಸದ ವಿಷಯ ಎಂದು ಕೇಂದ್ರ ಸಚಿವರು ತಿಳಿಸಿದರು.

ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಸುಪ್ರೀಂಕೋರ್ಟ್ ನಿಂದ ಬಂದ ತೀರ್ಮಾನದ ನಂತರ ಕೇಂದ್ರ ಸರ್ಕಾರವು ಸರ್ಕಾರದ ಹಣ ಬಳಸದೆ ದೇಶದಾ ದ್ಯಂತ ಜನರು ನೀಡುತ್ತಿರುವ ಕಾಣಿಕೆ ಮೂಲಕ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.

ಎಲ್ಲಾ ಶ್ರಮಜೀವಿಗಳು ದುಡಿದ ಹಣದಲ್ಲಿ ಕೊಡುಗೆ ನೀಡುತ್ತಿರುವುದು ದೊಡ್ಡ ವಿಷಯವಾಗಿದೆ. ದೇಶದ ಸಂಸ್ಕೃತಿ ಪರಂಪರೆಗಳಿಗೆ ಹೊಸ ಆಯಾಮವನ್ನು ಕೊಡುವ ಕೆಲಸ ಇದಾಗಿದೆ. ರಾಮಮಂದಿರ ನಿರ್ಮಾಣದ ಜೊತೆ ಜೊತೆಗೆ ರಾಮನ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

 

Leave a Reply

Your email address will not be published. Required fields are marked *

error: Content is protected !!