ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ‘ಪೇ ಸಿಎಂ’ ನ್ನು ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ.
ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ”ಪೇ ಸಿಎಂ ಡಿಜಿಟಲ್” ‘ ಪೇ ಟು ”ಚೀಫ್ ಮಿನಿಸ್ಟರ್ ರಿಲೀಫ್ ಫಂಡ್” ( ಸಿಎಂ ಆರ್ ಎಫ್) ಎಂಬ ಡಿಜಿಟಲ್ ಆಯಪ್ ಅಭಿವೃದ್ಧಿ ಪಡಿಸಿ ಆ ಮೂಲಕ ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ. ಈ ಮೂಲಕ ಅಭಿಯಾನವನ್ನು ಸರ್ಕಾರ ಪಾಸಿಟಿವ್ ಆಗಿ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಪೇ ಸಿಎಂ ಹೆಸರಿನಡಿ ಡಿಜಿಟಲ್ ಆಯಪ್ ಅಭಿವೃದ್ಧಿಪಡಿಸಿ ಈ ಮೂಲಕ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಸಾರ್ವಜನಿಕರು , ಸಂಘ ಸಂಸ್ಥೆಗಳು ನೆರವು ನೀಡಲು ಸಹಾಯ ವಾಗುವಂತೆ ಮಾಡಬಹುದು ಎಂದು ಆಡಳಿತ ಪಕ್ಷದ ಸದಸ್ಯ ಎಂ ಕೆ ಪ್ರಾಣೇಶ್ ಸಭಾಪತಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ಮಾಡುವ ಮೂಲಕ ಪೇಸಿಎಂ ಆಯಪ್ ನ್ನು ‘ಪೇ ಟು ಚೀಫ್ ಮಿನಿಸ್ಟರ್’ ರಿಲೀಫ್ ಫಂಡ್ ಎಂಬ ಹೆಸರಿನಲ್ಲಿ ಆಯಪ್ ಸಿದ್ದಪಡಿಸಿ ಆ ಮೂಲಕ ಪರಿಹಾರ ನಿಧಿಗೆ ಸಾರ್ವಜನಿಕರು , ಸಂಘ ಸಂಸ್ಥೆಗಳು ನೆರವು ನೀಡಲು ಸಹಾಯವಾಗುವಂತೆ ಮಾಡ ಬಹುದು.