Saturday, 27th July 2024

ಮಹದೇವಪುರ ವಲಯದಲ್ಲಿನ ಅನಧಿಕೃತ ಓಎಫ್‌ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರವರ ಸೂಚನೆ ಮೇರೆಗೆ ಮಹದೇವಪುರ ವಲಯದಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಒಟ್ಟು 32.9 ಕೀ.ಮೀ ಅನಧಿಕೃತವಾಗಿ ಅಳವಡಿಸಲಾಗಿದ್ದ ಓಎಫ್‌ಸಿ ಕೇಬಲ್‌ ಗಳನ್ನು ತೆರವುಗೊಳಿಸಲಾಗಿರುತ್ತದೆ.

ಈ ಪೈಕಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ವಾರ್ಡ್ ಮಟ್ಟದ ಸಹಾಯಕ ಅಭಿಯಂತರವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನಧಿಕೃತ ಓಎಫ್‌ಸಿ ತೆರವು ಕಾರ್ಯಾಚರಣೆಯಲ್ಲಿ ಕೆ.ಆರ್.ಪುರಂ ಉಪ ವಿಭಾಗದಲ್ಲಿ 3.00 ಕಿ.ಮೀ, ಹೊರಮಾವು ಉಪ ವಿಭಾಗದಲ್ಲಿ 5.00 ಕೀ.ಮೀ, ಹೂಡಿ ಉಪ ವಿಭಾಗದಲ್ಲಿ 13.4 ಕೀ.ಮೀ, ವೈಟ್ ಫೀಲ್ಡ್ ಉಪ ವಿಭಾಗದಲ್ಲಿ 6.00 ಕಿ.ಮೀ ಮತ್ತು ಮಾರತಹಳ್ಳಿ ಉಪ ವಿಭಾಗದಲ್ಲಿ 5.50 ಕೀ.ಮೀ ವಿದ್ಯುತ್ ಕಂಬ ಗಳ ಮೇಲೆ ಜೋತಾಡುತ್ತಿದ್ದ ಹಾಗೂ ಮರಗಳಿಗೆ ಸುತ್ತಿದ್ದ ಕೇಬಲ್‌ಗಳನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತ ದೃಷ್ಟಿಯಿಂದ ತೆರವು ಗೊಳಿಸ ಲಾಯಿತು.

ಮುಂದುವರೆದು ಬರುವ ದಿನಗಳಲ್ಲಿ ಇಂತಹ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯ ವಾಗಿ ತೆಗೆದು ಹಾಕಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲು ಕ್ರಮ ಜರುಗಿಸಲಾಗು ವುದೆಂದು ಮಹದೇವಪುರ ವಲಯದ ಮುಖ್ಯ ಇಂಜಿನಿಯರ್ ಆರ್.ಎಲ್. ಪರಮೇಶ್ವರಯ್ಯರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!