Saturday, 27th July 2024

ಇಂದಿರಾಗಾಂಧಿಯವರನ್ನು ವಾಜಪೇಯಿ ದುರ್ಗೆಗೆ ಹೋಲಿಸಿದ್ದರು: ಡಿ ಕೆ ಶಿವಕುಮಾರ್

ಬೆಂಗಳೂರು: ದುರ್ಗೆ ಎಂದರೆ ದುಃಖವನ್ನು ದೂರ ಮಾಡುವ ದೇವಿ. ಶ್ರೀಮತಿ ಇಂದಿರಾಗಾಂಧಿ ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಇಂದಿರಾಗಾಂಧಿ ಅವರು ಬಡತನ ನಿರ್ಮೂಲನೆ, ಎಲ್ಲ ವರ್ಗದ ಜನರ ಕಲ್ಯಾಣದ ಬಗ್ಗೆ ಆಲೋಚಿಸಿದರು. ಪಿಂಚಣಿ, ಸೇನೆ, ಮನೆ ನಿರ್ಮಾಣ, ಬ್ಯಾಂಕ್ ರಾಷ್ಟೀಕರಣ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ, ವಸತಿ, ಕ್ರೀಡೆ, ಕೃಷಿ – ಹೀಗೆ ಎಲ್ಲವನ್ನೂ ಉತ್ತೇಜಿಸುವ ಕಾರ್ಯಕ್ರಮ ಕೊಟ್ಟರು. ಹೀಗಾಗಿ ವಾಜಪೇಯಿ ಅವರು ಪಕ್ಷಬೇಧ ಮರೆತು ಆ ಮಾತು ಹೇಳಿದ್ದಾರೆ.

ಸವಾಲು ಮನೆ ಬಾಗಿಲಲ್ಲಿ ಇರುವುದಿಲ್ಲ, ನಾವು ಪರ್ವತ ಏರಬೇಕಿಲ್ಲ, ಸಮುದ್ರ ದಾಟಬೇಕಿಲ್ಲ. ನಮ್ಮ ಸವಾಲು ಹಳ್ಳಿಗಳಲ್ಲಿನ ಬಡತನ, ಪ್ರತಿ ಮನೆಯಲ್ಲಿರುವ ಜಾತಿ ವ್ಯವಸ್ಥೆ ಸರಿಪಡಿಸುವುದರಲ್ಲಿ ಇರುತ್ತದೆ, ಇರಬೇಕು. ಆಗ ದೇಶದ ಸಮಸ್ಯೆಗಳು ದೂರ ವಾಗುತ್ತವೆ ಎಂದು ಹೇಳಿದ್ದರು. ಒಂದು ವ್ಯಕ್ತಿ, ಒಂದು ಸಂಸ್ಥೆ ಮೇಲೆ ಪ್ರೀತಿ ಇದ್ದರೆ ಸಾಲದು. ಪ್ರೀತಿ ಜತೆಗೆ ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು. ಇತಿಹಾಸ, ನಮ್ಮ ನಾಯಕರ ತ್ಯಾಗ, ಬಲಿದಾನವನ್ನು ಯುವ ಸಮುದಾಯಕ್ಕೆ ತಿಳಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!