Saturday, 27th July 2024

ಟಿಕೆಟ್‌ ಕೌಂಟರ್‌ನಲ್ಲಿ ಸ್ಮಾರ್ಟ್‌ ಕಾರ್ಡ್‌ ರೀಚಾರ್ಜ್ ಆರಂಭ

ಬೆಂಗಳೂರು: ‘ನಮ್ಮ ಮೆಟ್ರೊ’ ನಿಲ್ದಾಣಗಳ ಟಿಕೆಟ್‌ ಕೌಂಟರ್‌ನಲ್ಲಿಯೇ ಹಳೆಯ ಸ್ಮಾರ್ಟ್‌ ಕಾರ್ಡ್‌ ರೀಚಾರ್ಜ್ ಮಾಡಿಸುವ ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಮಂಗಳವಾರ ಪುನರಾರಂಭ ಮಾಡಿದೆ.

ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೌಂಟರ್‌ನಲ್ಲಿ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ಗೆ ಅವಕಾಶ ನೀಡಿರಲಿಲ್ಲ. ಟೋಕನ್‌ ವಿತರಣೆ ಕೂಡ ಸ್ಥಗಿತಗೊಳಿಸಲಾಗಿತ್ತು. ಪ್ರಯಾಣಕ್ಕೂ ಒಂದು ತಾಸು ಮುಂಚೆಯೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಬೇಕಾ ಗಿತ್ತು. ಇಲ್ಲವೇ, ನಿಲ್ದಾಣದಲ್ಲಿ ಹೊಸ ಸ್ಮಾರ್ಟ್‌ಕಾರ್ಡ್‌ ಖರೀದಿಸಬೇಕಾಗಿತ್ತು.

‘ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ನಿರ್ಬಂಧಗಳಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಈಗ ಹಳೆಯ ಸ್ಮಾರ್ಟ್‌ಕಾರ್ಡ್‌ ಗಳನ್ನು ಕೌಂಟರ್‌ನಲ್ಲಿಯೇ ರಿಚಾರ್ಜ್‌ ಮಾಡಬಹುದು. ಆದರೆ, ನಗದು ಸ್ವೀಕರಿಸುವುದಿಲ್ಲ. ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ, ಪೇಟಿಎಂ ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಶುಲ್ಕ ಪಾವತಿಸಿ ರಿಚಾರ್ಜ್‌ ಮಾಡಿಸಿಕೊಳ್ಳಬಹು ದಾಗಿದೆ.

Leave a Reply

Your email address will not be published. Required fields are marked *

error: Content is protected !!