Sunday, 23rd June 2024

ಇಂದಿನಿಂದ ಶಾಲಾ-ಕಾಲೇಜು ಪುನರಾರಂಭ

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 9 ತಿಂಗಳ ಬಳಿಕ, ಇಂದಿನಿಂದ ಶಾಲಾ-ಕಾಲೇಜು ಪುನರಾರಂಭಗೊಂಡಿದೆ.

ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುತ್ತಿರುವುದರಿಂದ ಹಾಗೂ ಹೊಸ ವರ್ಷದ ದಿನ ಇಂದು ಶಾಲಾ-ಕಾಲೇಜುಗಳನ್ನು ಅನೇಕ ಕಡೆಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ. ವಿದ್ಯಾರ್ಥಿಗಳು ಕೂಡ ಶಾಲಾ-ಕಾಲೇಜುಗಳತ್ತ ಸಂತಸದಿಂದ ಕೊರೋನಾ ಭೀತಿಯ ನಡುವೆಯೂ ಹೆಜ್ಜೆ ಹಾಕಿದ್ದಾರೆ.

9 ತಿಂಗಳ ಬಳಿಕ ರಾಜ್ಯಾದ್ಯಂತ ಶಾಲಾ ಕಾಲೇಜು ಪುನರಾರಂಭ. SSLC, PUC ವಿದ್ಯಾರ್ಥಿಗಳಿಗೆ ತರಗತಿ ಶುರುವಾಗಿದೆ. ಪೋಷಕರ ಅನುಮತಿಯೊಂದಿಗೆ ಮಕ್ಕಳು ಹಾಜರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತರಗತಿ ಆರಂಭಿಸುತ್ತಿದ್ದೇವೆ ಎಂದ ಶಿಕ್ಷಣ ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!