Saturday, 7th September 2024

ರಾಜ್ಯಕ್ಕೆ ಬಜೆಟ್ ನಲ್ಲಿ ಚೊಂಬು ನೀಡಿದ ಕೇಂದ್ರ: ಪ್ರತಿಭಟನೆ

ತುಮಕೂರು:ಕೇಂದ್ರದ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣ ಸಲಾಗಿದೆ.ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಮುಂದುವರೆಸಿ, ಚೊಂಬು ನೀಡಿದೆ ಎಂದು ಆಪಾದಿಸಿ, ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಭದ್ರಮ್ಮ ವೃತ್ತಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ತಲೆಯ ಮೇಲೆ,ಕೈಯಲ್ಲಿ ಚೊಂಬು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಈ ಬಾರಿಯೂ ಕರ್ನಾಟಕಕ್ಕೆ ಚೆಂಬು ನೀಡಿದೆ.ರಾಜ್ಯದಿಂದ ಬಿಜೆಪಿಯ 19 ಜನ ಸಂಸತ್ ಸದಸ್ಯರು ಆಯ್ಕೆಯಾಗಿ, ನಾಲ್ವರು ಸಚಿವ ರಾಗಿದ್ದರೂ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಮುಂದುವೆರಿಸಿದೆ ಎಂದು ಆಪಾದಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಕೇಂದ್ರ ಸರಕಾರದಲ್ಲಿ ರಾಜ್ಯದ 4 ಜನ ಮಂತ್ರಿಗಳಿದ್ದಾಗ್ಯೂ ರಾಜ್ಯಕ್ಕೆ ಬಿಜೆಪಿ ಯಿಂದ ಘನ ಘೋರ ಅನ್ಯಾಯವಾಗಿದೆ.ಮಿತ್ರ ಪಕ್ಷಗಳಿಂದ ಕುರ್ಚ ಉಳಿಸಿಕೊಳ್ಳಲು ಬಿಹಾರ ಮತ್ತು ಆಂದ್ರ ಪ್ರದೇಶಕ್ಕೆ ಬಜೆಟ್‌ನ ಬಹುಪಾಲು ನೀಡಿ, ಕರ್ನಾಟಕವನ್ನು ಕಡೆಗಣ ಸಲಾಗಿದೆ.ಇದರ ವಿರುದ್ದ ಮುಂದಿನ ಮೂರು ದಿನಗಳ ಕಾಲ ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.

ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ಕೇಂದ್ರದ ಮಲತಾಯಿ ಧೋರಣೆ ಈ ವರ್ಷದ ಬಜೆಟ್‌ನಲ್ಲಿಯೂ ಮುಂದುವರೆ ದಿದ್ದು,ಕರ್ನಾಟಕದಿಂದ ವಾರ್ಷಿಕ ಸುಮಾರು 4.50 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಬಾಚಿಕೊಂಡು, ಉತ್ತರ ಭಾರತದ ಬಿಹಾರ ವನ್ನು ಉದ್ದಾರ ಮಾಡಲು ಹೊರಟಿದೆ.ಜಿಎಸ್ಟಿ ಪಾಲು ಪಡೆಯಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡಸಿಯೂ ಪ್ರಯೋಜನವಾಗದೆ, ಕೋರ್ಟು ಮೇಟಿಲೇರಿ, ರಾಜ್ಯದ ಪಾಲು ಪಡೆಯು ವಂತಹ ಸ್ಥಿತಿ ತಲುಪಿರುವುದು ಕೇಂದ್ರದ ಇಬ್ಬಗೆಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ರೈತರ ಬಹುದಿನದ ಬೇಡಿಕೆ ಎಂ.ಎಸ್.ಪಿ. ಕಾಯ್ದೆ ಜಾರಿಗೆ ತರದೆ ಮೋಸ ಮಾಡಿದೆ.ಅಲ್ಲದೆ ಶಿಕ್ಷಣ,ಆರೋಗ್ಯ ಕ್ಷೇತ್ರಗಳ ಅನುದಾನ ಕಡಿತ ಮಾಡಿ, ಜನರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ಮಾತನಾಡಿ,ಸಂವಿಧಾನ ಪ್ರಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು.ಆದರೆ ಉತ್ತರ ಭಾರತಕ್ಕೆ ಒಂದು ರೀತಿ, ದಕ್ಷಿಣ ಭಾರತಕ್ಕೆ ಒಂದು ರೀತಿ ಎಂಬAತಹ ತಾರತಮ್ಯ ನೀತಿಯನ್ನು ಕೇಂದ್ರ ಅನುಸರಿಸುತ್ತಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಿತ್ರ ಪಕ್ಷ ಅಧಿಕಾರದಲ್ಲಿರುವ ಬಿಹಾರಕ್ಕೆ 58 ಸಾವಿರ ಕೋಟಿ,ಆಂಧ್ರ ಪ್ರದೇಶಕ್ಕೆ 15 ಸಾವಿರ ಕೋಟಿ ನೀಡಿ, ಕರ್ನಾಟಕಕ್ಕೆ ಚೆಂಬು ನೀಡಿದೆ ಎಂದರು.

ಪ್ರತಿಭಟನೆಯಲ್ಲಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹೆಚ್.ಸಿ.ಹನುಮಂತಯ್ಯ, ವಾಲೆಚಂದ್ರಯ್ಯ, ತರುಣೇಶ್, ಅಸ್ಲಾಂಪಾಷ,  ಮಂಜುನಾಥ್, ಬ್ಲಾಕ್‌ ಕಾ0ಗ್ರೆಸ್ ಅಧ್ಯಕ್ಷ ಮಹೇಶ್, ಸುಜಾತ,ಸಂಜೀವಕುಮಾರ್, ನಟರಾಜಶೆಟ್ಟಿ, ಜ್ವಾಲಮಾಲ ರಾಜಣ್ಣ, ರೇವಣ್ಣಸಿದ್ದಯ್ಯ, ಬೋವಿಪಾಳ್ಳ ಉಮೇಶ್, ಕೈದಾಳ ರಮೇಶ್, ಶಿವಾಜಿ, ಗೀತಾ, ಭಾಗ್ಯಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!