Saturday, 27th July 2024

ಹಾಸ್ಯದಿಗ್ಗಜ ದಿ.ನರಸಿಂಹರಾಜು ಶತಮಾನೋತ್ಸವ

ತಿಪಟೂರು: ಕನ್ನಡ ಚಿತ್ರರಂಗದ ಹಾಸ್ಯದಿಗ್ಗಜ ದಿ.ನರಸಿಂಹರಾಜು ಶತಮಾನೋತ್ಸವ ಅವರ ಹುಟ್ಟೂರಿನಲ್ಲಿ ಕುಟುಂಬ ಸಮೇತ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕರಾದ ಕೆ.ಷಡಕ್ಷರಿ ಹೇಳಿ ದರು.

ನಗರದ ನರಸಿಂಹರಾಜು ಕಲಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ನಟಸಾರ್ವಭೌಮ ಡಾ. ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಇಡೀ ಚಿತ್ರಕ್ಕೆ ಹಾಸ್ಯದ ಮುಖಾಂತರ ಮೆರುಗು ನೀಡುತ್ತಿದ್ದರು, ರಾಜಕುಮಾರ್ ರವರ ಯಶಸ್ಸಿಗೆ ಈ ಹಾಸ್ಯನಟರ ಅಭಿನಯವು ಮುಖ್ಯವಾಗಿತ್ತು.

ಇಂತಹ ಹಾಸ್ಯ ನಟನ ತವರಲ್ಲಿ ೧೦೦ನೇ ಜನ್ಮದಿನ ಅದ್ದೂರಿಯಾಗಿ ಆಚರಿಸಲಾಗು ವುದು ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಉದ್ಘಾಟನೆ ಮಾಡಲಿದ್ದು, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಣಾಧಿಕಾರಿ ಜಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಉಪ ವಿಭಾಗಾಧಿಕಾರಿ ಶ್ರೀಮತಿ ಕಲ್ಪಶ್ರೀ ದಂಡಾಧಿಕಾರಿ ಪವನ್ ಕುಮಾರ್ ಪೌರಾಯುಕ್ತ ವಿಶ್ವೇಶ್ವರ ಬಿದರಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಜೆ ೭ಗೆ ತಿಪಟೂರಿನಾದ್ಯಂತ ಜ್ಯೋತಿ ಬೆಳಗುವ ಮುಖಾಂತರ ಪ್ರತಿ ಮನೆಯಲ್ಲಿ ಆಚರಿಸಲಾಗುವುದು ಇದೊಂದು ಕಲ್ಪತರು ನಾಡಿನ ಹಬ್ಬವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲಾ ಕೃತಿ ತಂಡದ ಸದಸ್ಯರು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

*

ಕಲ್ಪತರು ನಾಡು ತಿಪಟೂರು ಕನ್ನಡ ಚಿತ್ರರಂಗಕ್ಕೆ ನೂರಾರು ಕಲಾವಿದರನ್ನು ಪರಿಚಯಿಸಿದ ಈ ಮಣ್ಣಿನ ಗುಣ ಕನ್ನಡ ಚಿತ್ರ ರಂಗದ ಕಲಾವಿದರಿಗೆ ಒಂದು ಕಾಲದಲ್ಲಿ ಅನ್ನ ನೀಡಿ ಬೆಳೆಸಿದ ಕೀರ್ತಿ ನಮಗೆ ಸಲ್ಲುತ್ತದೆ ನರಸಿಂಹರಾಜು ಭವನದಲ್ಲಿ ಮೊದಲ ಕಾರ್ಯಕ್ರಮವಾಗಿ ೧೦೦ನೇ ಜನ್ಮದಿನಾಚರಣೆ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಅವಿಸ್ಮರಣೀಯ ದಿನ ಈ ಭವನದಲ್ಲಿ ಮುಂದೆಯೂ ಸಹ ಕಲಾವೈಭವ ಮುಂದುವರೆದು, ಕಲಾ ರಸಿಕರಿಗೆ ರಸದೌತಣ ಸಿಗಲಿದೆ.

ಡಾ. ಶ್ರೀಧರ್, ಕುಮಾರ್ ಆಸ್ಪತ್ರೆ ವೈದ್ಯರು.

Leave a Reply

Your email address will not be published. Required fields are marked *

error: Content is protected !!