Sunday, 8th September 2024

ಸ್ವಚ್ಛ ಸರ್ವೇಕ್ಷಣ್ ಅಂಗವಾಗಿ ಸೈಕ್ಲೋಥಾನ್‌

ತುಮಕೂರು: ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ಸಿಟಿ ವತಿಯಿಂದ ಸ್ವಚ್ಛ ಸರ್ವೇಕ್ಷಣ್ 2023 ರ ಅಂಗವಾಗಿ ಸೈಕ್ಲೋಥಾನ್‌ನ್ನು  ನಡೆಸಲಾಯಿತು.
ಸೈಕ್ಲೋಥಾನ್ ನೇತೃತ್ವ ವಹಿಸಿದ್ದ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮಾತ ನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ನಗರದ ಯುವಕರು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೆ. 15 ರಿಂದ ಅ. 2 ರವರೆಗೆ ಸೈಕ್ಲೋ ಥಾನ್ ನಡೆಸಲಾಗುತ್ತಿದೆ ಎಂದರು.
ಇದು ಇಂಡಿಯನ್ ಸ್ವಚ್ಚತಾ ಲೀಗ್ 2.2 ಆಗಿದ್ದು, 20 ದಿನಗಳು ಸ್ವಚ್ಚತಾ ಶ್ರಮದಾನದ ಅಡಿಯಲ್ಲಿ ಕಾರ್ಯಕ್ರಮ ನಡೆಯು ತ್ತಿರುವ ಸೈಕ್ಲೊಥಾನ್ ಇದಾಗಿದೆ. ಯುವಕರು ಮತ್ತು ಜನಸಾಮಾನ್ಯರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಸೈಕ್ಲೋಥಾನ್ ಮೂಲಕ ಪರಿಸರ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಹೀಗಾಗಿ ಸೈಕಲ್ ಜಾಥಾ ಮೂಲಕ ಯುವಕರು ಹಾಗೂ ನಾಗರಿಕರಲ್ಲಿ ನಗರದ ಸ್ವಚ್ಛತೆ ಬಗ್ಗೆ ಮಹಾನಗರ ಪಾಲಿಕೆ ವತಿಯಿಂದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಮಾನಿಕೆರೆಯಿಂದ ಆರಂಭವಾದ ಸೈಕ್ಲೋಥಾನ್ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಬಟವಾಡಿ ತಲುಪಿ, ಮತ್ತೆ ಬಿ.ಹೆಚ್. ರಸ್ತೆ ಮುಖೇನ ಭದ್ರಮ್ಮ ಸರ್ಕಲ್‌ನಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮುಖೇನ ಅಮಾನಿಕೆರೆ ತಲುಪಿತು.
ಸೈಕ್ಲೋಥಾನ್ ಹಾದು ಹೋದ ದಾರಿಯುದ್ಧಕ್ಕೂ ಜನಸಾಮಾನ್ಯರಲ್ಲಿ ನಗರದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಸೈಕ್ಲೋಥಾನ್‌ನಲ್ಲಿ ಪಾಲಿಕೆಯ ಪರಿಸರ ಅಭಿಯಂತರರಾದ ನಿಖಿತ, ಪೂರ್ಣಿಮಾ, ಪ್ರದೀಪ್, ನಿಖಿಲ್, 150 ಅಧಿಕ ಸೈಕಲ್ ಸವಾರರು, ಪಾಲಿಕೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!