Friday, 13th December 2024

ದ.ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್ ಲೋಕಾರ್ಪಣೆಗೆ ಸಿದ್ಧ

ಮಂಗಳೂರು: ಶೌಚದ ಸಮಸ್ಯೆ ಮಹಿಳೆಯರಿಗೆ ಎಲ್ಲರಿಗೂ ಕಾಡುತ್ತಿರುತ್ತದೆ. ಸರಿಯಾದ ವ್ಯವಸ್ಥೆಯಿಲ್ಲದೆ ಮಹಿಳೆಯರು ಪರದಾಡುವಂತಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲೆಂದೇ ಮಹಿಳಾ ಅಧಿಕಾರಿಯೊಬ್ಬರು ಮುತುವರ್ಜಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್ ಲೋಕಾರ್ಪಣೆಗೆ ಸಿದ್ಧವಾಗಿದೆ.

ಬಂಟ್ವಾಳ ಮಿನಿವಿಧಾನಸೌಧ ಸನಿಹದಲ್ಲೇ ಈ ಪಿಂಕ್ ಟಾಯ್ಲೆಟ್ ನಿರ್ಮಾಣವಾಗುತ್ತಿದೆ. ಬಂಟ್ವಾಳ ಪುರಸಭೆಯ ಮುಖ್ಯಾಧಿ ಕಾರಿ ಲೀನಾ ಬ್ರಿಟ್ಟೋ ಪರಿಕಲ್ಪನೆಯಲ್ಲಿ ಪಿಂಕ್ ಟಾಯ್ಲೆಟ್ ತಲೆಯೆತ್ತುತ್ತಿದೆ.

ಸ್ಯಾನಿಟರಿ ನ್ಯಾಪ್‌ಕಿನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶೌಚಾಲಯದ ಪಕ್ಕದಲ್ಲೇ ತಾಲೂಕು ಕಚೇರಿ, ನ್ಯಾಯಾಲಯ ರಿದಂತೆ ಹಲವಾರು ಸರ್ಕಾರಿ ಕಚೇರಿಗಳು ಇರುವು ದರಿಂದ ಅಲ್ಲಿಗೆ ಆಗಮಿಸಿದ ಮಹಿಳೆಯರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ. ವಿಶ್ರಾಂತಿ ಕೊಠಡಿಗೆ ಎಸಿ ಅಳವಡಿಸಲಾಗಿದೆ. ತೊಟ್ಟಿಲು ಅಳವಡಿಸುವ ಚಿಂತನೆಯೂ ಇದೆ. ಈ ಮೂಲಕ ಮಹಿಳೆಯರ ಕೆಲವು ವೈಯುಕ್ತಿಕ ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ಪರಿಹಾರ ಸಿಗುವಂತಾಗಿದೆ.

ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಬಂಟ್ವಾಳ ಪುರಸಭೆಗೆ ಒಂದು ಕೋಟಿ ಅನುದಾನ ಬಂದಿದೆ. ಈ ಯೋಜನೆಯಡಿ ಯಲ್ಲಿ 26 ಲಕ್ಷ ಅನುದಾನವನ್ನು ಪಿಂಕ್ ಟಾಯ್ಲೆಟ್‌ಗೆ ಬಳಕೆ ಮಾಡಲಾಗಿದೆ.

2022ರ ಎಪ್ರಿಲ್‌ನಲ್ಲಿ ಪಿಂಕ್ ಶೌಚಾಲಯದ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.