ತಿಪಟೂರು : ತುಮಕೂರು ದಸರಾ ಮಹೋತ್ಸವ ಹಾಗೂ ರಂಗಾಯಣ ಮೈಸೂರನಲ್ಲಿ ನಡೆಯುತ್ತಿರುವ ನವರಾತ್ರಿ ಜನಪದ ರಂಗ ಉತ್ಸವ ಕಾರ್ಯಕ್ರಮಕ್ಕೆ ತಿಪಟೂರಿನ ಕಲಾವಿದರು ಭಾಗವಹಿಸಿ ಕಲೆ ಪ್ರದರ್ಶನವನ್ನು ಮಾಡಲಿದ್ದಾರೆ.
ತುಮಕೂರು ದಸರಾ ಮಹೋತ್ಸವದಲ್ಲಿ ಕಸಬಾ ಹೋಬಳಿಯ ಮತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಬಿದರಾಂಬಿಕ ದೇವಿ ಕೃಪಾಪೋಷಿತ ಚಿಣ್ಣರ ಮೂಡ¯ಪಾಯ ಯಕ್ಷಗಾನ ಮಂಡಳಿ ವತಿಯಿಂದ ಸೀತಾ ಪರಿತ್ಯಾಗ ನಾಟಕವನ್ನು ಭಾಗವತ್ ಮಂಜಪ್ಪ ನೇತೃತ್ವದಲ್ಲಿ, ಅರಳಗುಪ್ಪೆ ಎ,ಆರ್ ಪುಟ್ಟಸ್ವಾಮಿ ತಂಡದವರಿ0ದ ಮೂಡಲಪಾಯ ಯಕ್ಷಗಾನದ ದೇವಿ ಮಹಾತ್ಮೆ ಕಾರ್ಯಕ್ರಮ ಹಾಗೂ ನಟರಾಜ ನೃತ್ಯ ಶಾಲೆವತಿಯಿಂದ ಶಾಸ್ತ್ರೀಯ ನೃತ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ ನಡೆಯಲಿದೆಮೈಸೂರಿನ ರಂಗಾಯಣದಲ್ಲಿ ಅರಳಗುಪ್ಪೆ ಸಿದ್ದಿ ವಿನಾಯಕ ಹವ್ಯಾಸಿ ಯಕ್ಷಗಾನ ಕಲಾ ಸಂಘದತಿಯಿಂದ ದಕ್ಷ ಯಜ್ಞ ಯಕ್ಷಗಾನ ಪ್ರಸಂಗ ಕಾರ್ಯಕ್ರಮ, ಹಾಗೂ ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ ವತಿಯಿಂದ ಶಂಕರಪ್ಪ ನೇತೃತ್ವದಲ್ಲಿ ಕರಿಭಂಟನ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ನಲ್ಲಿ ಅವಿರತವಾಗಿ ಕಲೆಯನ್ನು ಪ್ರೋತ್ಸಾಹಿಸಿಕೊಂಡು, ಅಭಿನಯಿಸಿಕೊಂಡು ಬರುತ್ತಿರುವ ಕಲಾವಿದ ಎ.ಬಿ.ಶಂಕರಪ್ಪ ಅಂಚೆಕೊಪ್ಪಲು ಇವರಿಗೆ ರಂಗಾಯಣದ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.