Saturday, 27th July 2024

ಕಲ್ಲಿನಕೋಟೆ ನೆಲದಲ್ಲಿ ಚಾಲಕ ರಹಿತ ಡ್ರೋಣ ರುಸ್ತುಂ-2 ಯಶಸ್ವಿ ಹಾರಾಟ

ಚಿತ್ರದುರ್ಗ : ಚಾಲಕ ರಹಿತ ಡ್ರೋಣ ರುಸ್ತುಂ-2 ಪ್ರಯೋಗಾರ್ಥ ಹಾರಾಟ ಕೊನೆಗೂ ಯಶಸ್ವಿ ಯಾಗಿದೆ.

ಈ ಮೂಲಕ ದೇಶದ ವಾಯು ಪಡೆಗೆ ಮತ್ತಷ್ಟು ಶಕ್ತಿ ತುಂಬಲಿರುವ ರುಸ್ತುಂ-2 DRDO ಪ್ರದೇಶದ ಏರೋ ನಾಟಿಕ್ ಟೆಸ್ಟ್ರೇಂಜ್ ನಲ್ಲಿ ಹಾರಾಟ ನಡೆಸಿ ಭಾರತೀಯರ ಹೆಮ್ಮೆಗೆ ಪಾತ್ರವಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪೂರ DRDO ದಲ್ಲಿ ನಡೆದ ಪ್ರಯೋಗ ಯಶಸ್ವಿ ಯಾಗಿದ್ದು, ಐತಿಹಾಸಿಕ ಕ್ಷಣ ವಾಗಿದೆ. ಸತತ ಎಂಟು ಗಂಟೆಗಳ ಕಾಲ 40 ಕಿಮೀ ವ್ಯಾಪ್ತಿಯಲ್ಲಿ ಹಾರಾಟ ನಡೆಸಿದ ರುಸ್ತುಂ-2 ಬರೊನ್ನರಿ 16 ಸಾವಿರ ಅಡಿ ಎತ್ತರಸದಲ್ಲಿ ಸತತ ಹಾರಾಟ ನಡೆಸಿತು.

ರುಸ್ತುಂ-2 ಡ್ರೋಣ ಭಾರತ ದೇಶದ ಹೆಮ್ಮೆಯ ಚಾಲಕ ರಹಿತ ವಿಮಾನವಾಗಿದೆ. ಇನ್ನೂ ಈ ಹಿಂದೆ ಕೂಡ ರುಸ್ತುಂ-2 ಪ್ರಾಯೋ ಗಿಕ ಹಾರಾಟ ನಡೆಸಲಾಗಿತ್ತು ಆದರೆ ಅದು ಯಶಸ್ವಿಯಾಗಿ ರಲಿಲ್ಲ. 2019 ಸೆಪ್ಟೆಂಬರ್ 17ರಂದು ರುಸ್ತುಂ-2 ಪ್ರಾಯೋಗಿಕ ಹಾರಾಟದ ವೇಳೆ ಪತನವಾಗಿತ್ತು.

ಆದರೆ ಈಗ ರುಸ್ತುಂ-2 ಯಶಸ್ವಿ ಹಾರಾಟ ನಡೆಸಿ ಅಲ್ಲಿನ ಸಿಬ್ಬಂದಿಗಳಿಗೆ ಹುಮ್ಮಸ್ಸು ತುಂಬಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಹಲವರು ಸಾಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!