Friday, 24th May 2024

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ

ದಾವಣಗೆರೆ: ಸರ್ಕಾರಿ ವಲಯದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಫೇಕ್‌ ಖಾತೆಗಳ ಕಾಟ ಬಿಟ್ಟು ಬಿಡುವಂತೆ ಕಾಣುತ್ತಿಲ್ಲ.

ಒಂದು ದಿನ ಹಿಂದಷ್ಟೇ, ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ ಬುಕ್ ಖಾತೆ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಸುದ್ದಿ ವೈರಲ್‌ ಆಗಿತ್ತು. ಈಗ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆಯಲಾಗಿದೆ.

ಉತ್ತರಪ್ರದೇಶದ ವ್ಯಕ್ತಿಯೊಬ್ಬ ‘ಹನುಮಂತರಾಯ ಹೊಸ್‌ಪೇಟ್’ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಮ್ಮ ಪತ್ನಿಯಿಂದ ವಿಷಯ ತಿಳಿದ ಎಸ್‌ಪಿಯವರು ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿ, ಡಿಲೀಟ್ ಮಾಡಿಸಿದ್ದಾರೆ.

‘ನನ್ನ ಫೇಸ್‌ಬುಕ್‌ ಖಾತೆಯ ಮನವಿಗಳಿಗೆ ಯಾರೂ ಪ್ರತಿಕ್ರಿಯಿಸಬೇಡಿ. ನಕಲಿ ಖಾತೆ ಸೃಷ್ಟಿಸಿರುವ ವ್ಯಕ್ತಿಯ ನಂಬರ್ ಪತ್ತೆ ಯಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಅಪರಾಧ ಬಗ್ಗೆ ಸಾರ್ವನಿಕರಿಗೆ ಜಾಗೃತಿ ಮೂಡಿಸಲು ಶೀಘ್ರ ಜಾಗೃತಿ ಅಭಿಯಾನ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!