Sunday, 23rd June 2024

ಪ್ರಥಮ ಹಿಂದಿ ಪತ್ರಿಕೆ ಸಂಪಾದಕ ವಿಶ್ವನಾಥ ಪಾಟೀಲ ಹಕ್ಯಾಳ್ ನಿಧನ

ಬೀದರ್: ಹಿರಿಯ ಪತ್ರಕರ್ತ, ಕರ್ನಾಟಕದ ಪ್ರಥಮ ಹಿಂದಿ ಪತ್ರಿಕೆ ಸಂಪಾದಕ ವಿಶ್ವನಾಥ ಪಾಟೀಲ ಹಕ್ಯಾಳ್(84)  ಭಾನುವಾರ ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ದಮನ್ ಪಾಟೀಲ ಎಂದೇ ಕರೆಯಿಸಿಕೊಳ್ಳುತ್ತಿದ್ದ ಅವರು ವಯೋ ಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದರು.

ಬೀದರ್ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ್ದ ವಿಶ್ವನಾಥ ಪಾಟೀಲ ಅವರು, ನಂತರ ಕಲ್ಬುರ್ಗಿ ಮತ್ತು ವಿಜಯಪುರದ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 1970ರಲ್ಲಿ ದಮನ್ ಪತ್ರಿಕೆಯನ್ನು ಆರಂಭಿಸಿದ್ದರು. ಅಭಿವೃದ್ಧಿ ಪತ್ರಿಕೋದ್ಯಮ ಸೇರಿದಂತೆ ಹಲವು ಪ್ರಶಸ್ತಿ, ಸಮ್ಮಾನಗಳಿಗೆ ಪಾತ್ರರಾಗಿದ್ದರು.

ನಗರದ ಎಸ್‌ಬಿಐ ಬ್ಯಾಂಕ್ ಕಾಲೋನಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಗಂಡು , ಓರ್ವ ಹೆಣ್ಣು ಮಗಳು ಸೇರಿ ಅಪಾರ ಬಂಧು ಬಳಗ , ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮ ವಾರ ನಗರದ ನರಸಿಂಹ ಝರಣಾ ಬಳಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

Leave a Reply

Your email address will not be published. Required fields are marked *

error: Content is protected !!