Saturday, 14th December 2024

ರಾಜ್ಯದಲ್ಲಿ ಹಸ್ತ ಏರುಗತಿ ಯಶವಂತ ಗುರೂಜಿ ಭವಿಷ್ಯ

ಚಿಕ್ಕನಾಯಕನಹಳ್ಳಿ: ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ೨೨ ರಿಂದ ೨೩ ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಪಟೂರು ತಾಲ್ಲೂಕಿನ ನೊಣವಿನ ಕೆರೆಯ ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹಾಗೆಯೇ, ಕೇಂದ್ರದಲ್ಲಿ ಓರ್ವ ಮಹಿಳೆ ಪ್ರಧಾನಿಯಾಗಿ ಹೊರಹೊಮ್ಮಲಿದ್ದು, ದೇಶದಲ್ಲಿ ಅಧಿಕಾರ ಚಲಾಯಿಸುವಳು ಎಂದು ಭವಿಷ್ಯ ನುಡಿದಿದ್ದಾರೆ. ಪ್ರಿಯಾಂಕ ಗಾಂಧಿಯವರ ಜನ್ಮ ಲಗ್ನ ಜಾತಕ ಹಾಗು ಈಗಿನ ಕಾಲಜ್ಞಾನದ ಅನುಸಾರ ಅವರಿಗೆ ಪ್ರಧಾನಿಯಾಗುವ ಯೋಗವಿದೆ ಎಂದು ಕಾಲಜ್ಞಾನದ ಭವಿಷ್ಯ ತಿಳಿಸಿದರು. ಲೋಕಸಭೆಯ ಚುನಾವಣೆಗಳು ರಂಗೇರಿರುವ ಸಂದರ್ಭದಲ್ಲಿ ಅವರ ಈ ಭವಿಷ್ಯ ಅನೇಕರಿಗೆ ಖುಷಿ ಹಾಗು ಆತಂಕ ತಂದಿದೆ.

ಈ ಹಿಂದೆ ಅನೇಕ ಚುನಾವಣೆಗಳ ಭವಿಷ್ಯಗಳನ್ನು ನುಡಿದು ಸೈ ಎನಿಸಿಕೊಂಡಿರುವ ಗುರೂಜಿಯವರ ಈ ಭವಿಷ್ಯವಾಣಿಯ ಮೇಲೆ ಅಪಾರ ನಿರೀಕ್ಷೆ ಗರಿಗೆದರಿದೆ. ಮುಂದುವರೆದು ಮಾತ ನಾಡಿದ ಗುರೂಜಿ ೨೦೨೪-೨೫ ರ ಯುಗಾದಿಯ ಪಂಚಾ0ಗ ಕ್ರೋಧಿನಾಮ ಸಂವತ್ಸರವಾಗಿದ್ದು ಕುಜ ಅಧಿಪತಿಯಾಗಿದ್ದಾನೆ. ವರ್ಷಧಾರೆ ಅಷ್ಟಕಷ್ಟೆ. ಬೆಂಕಿ ಅವಘಡ, ಯುದ್ದಭೀತಿ, ಅಪಘಾತ, ಹೆಚ್ಚಾಗಿರುತ್ತದೆ.

ಮಳೆಯ ಅಭಾವ ತಡೆಯಲು ವರ್ಷದ ಮಧ್ಯಭಾಗದಲ್ಲಿ ನೊಣವಿನಕೆರೆಯಲ್ಲಿ ಯಾಗ ಮಾಡುತ್ತೇನೆಂದು ವಿವರಿಸಿ ೨೦೨೫ ರ ಅಂತಿಮಕ್ಕೆ ನೀರಿನ ಅಭಾವದಿಂದ ಬೆಂಗಳೂರನ್ನು ಈಗಿನ ಅರ್ಧದಷ್ಟು ಜನ ಖಾಲಿ ಮಾಡಲಿದ್ದಾರೆ ಎಂದು ಸ್ಪೋಟಕ ಭವಿಷ್ಯ ನುಡಿದರು.