Friday, 26th April 2024

ರಾಮನಷ್ಟೇ ಹನುಮನಿಗೂ ಭಕ್ತಕೋಟಿ ಇದೆ: ರಾಜ್ಯಪಾಲ ವಜೂಭಾಯಿ ವಾಲಾ

ಸ್ವಗ್ರಾಮಕ್ಕೆ ಅಂಜನಾದ್ರಿಯ ಶಿಲೆ, ಮೂರ್ತಿ ಒಯ್ದ ರಾಜ್ಯಪಾಲ

ಕೊಪ್ಪಳ: ರಾಜ್ಯಪಾಲ ವಜುಬಾಯಿ ವಾಲಾ ಅವರ ಸ್ವಗ್ರಾಮ ಗುಜರಾತ್‌ನ ಆನಂದ್ ಜಿಲ್ಲೆಯ ಲಂಬಾವೇಲಾದಲ್ಲಿ ನಿರ್ಮಾಣ ಆಗುತ್ತಿರುವ ಹನುಮಂತ ದೇಗುಲಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆ ಹಾಗೂ ಹನುಮ ಮೂರ್ತಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಪಡೆದು ಭಾನುವಾರ ತೆರಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಮಭಕ್ತರು ಎಷ್ಟಿದ್ದಾರೊ, ಅಷ್ಟೇ ಹನುಮಭಕ್ತರೂ ಇದ್ದಾರೆ. ಅಂತೆಯೇ ಹನುಮನಿಗೆ ನಿತ್ಯಪೂಜೆ, ಭಕ್ತಕೋಟಿ ನಡೆದುಕೊಳ್ಳುತ್ತಾರೆ. ನಮ್ಮ ಸ್ವಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇ ಯನ ದೇವಸ್ಥಾನಕ್ಕೆ ಹನುಮ ಜನಿಸಿದ ಸ್ಥಳ ಅಂಜನಾದ್ರಿಯ ಶಿಲೆ, ಮೂರ್ತಿಯನ್ನು ಒಯ್ಯಲಾಗುತ್ತಿದೆ ಎಂದರು.

ನಿನ್ನ ಕೆಲಸವನ್ನು ನಿಷ್ಕಲ್ಮಶವಾಗಿ ಮಾಡು, ಪ್ರತಿಫಲವನ್ನು ಭಗವಂತನಿಗೆ ಬಿಡು ಎನ್ನುವುದಕ್ಕೆ ಮಾರುತಿ ಸಾಕ್ಷಿ. ಇಲ್ಲಿನ ಅಂಜನಾದ್ರಿ ಪೂಜಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಇಲ್ಲಿನ ಆಡಳಿತ ಅದನ್ನು ಬಗೆ ಹರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಡಿ. ಶ್ರೀಧರ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!