Saturday, 27th July 2024

ಭಾರಿ ಮಳೆಗೆ ಉಡುಪಿ ಜಿಲ್ಲೆ ತತ್ತರ

ಉಡುಪಿ : ಭಾರಿ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದ್ದು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದೆ.

ಉಡುಪಿಯ ಕಲ್ಸಂಕ ಮಠದ ಕೆರೆ ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಕೆಮ್ಮಣ್ಣು,ಕುದುರು ಸೇರಿದಂತೆ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಮಠದ ರಾಜಾಂಗಣದ ವಾಹನ ನಿಲುಗಡೆ ಪ್ರದೇಶ ಸಂಪೂರ್ಣವಾಗಿ ಮುಳುಗಿದೆ. ಉಚ್ಚಿಲ ಕುಂಜೂರು ದೇವಸ್ಥಾನ ಪ್ರಾಂಗಣದೊಳಗೆ ನೀರು ನುಗ್ಗಿದೆ. ಸೊಂಟದ ವರೆಗೆ ನೀರು ಬಂದಿದೆ.

ಕಾರ್ಕಳ ತಾಲೂಕಿನ ಸ್ವರ್ಣಾ ನದಿ ಪ್ರವಾಹಕ್ಕೆ ಎಣ್ಣೆಹೊಳೆಯ ಪೇಟೆ ಭಾಗ ಸಂಪೂರ್ಣ ವಾಗಿ ಮುಳುಗಡೆಯಾಗಿದ್ದು , ಹೋಟೇಲ್ ,ಡೈರಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಐದು ಅಡಿಗಳಷ್ಟು ನೀರು ನಿಂತಿದೆ.

ಅಣೆಕಟ್ಟು ನಿರ್ಮಾಣದ ಸಾಮಾಗ್ರಿ ನೀರಲ್ಲಿ ಮುಳುಗಿದೆ. 46 ವರ್ಷಗಳ ಹಿಂದೆ ಇಂತಹ ಪ್ರವಾಹ ಬಂದಿದೆ. ಈ ಮಳೆಯ ಅಬ್ಬರವು ಭೀತಿ ಹೆಚ್ಚಿಸಿದೆ. ಅಜೆಕಾರು ರಾಜ್ಯ ಹೆದ್ದಾರಿ ಮುಳುಗಡೆಯಾಗಿದ್ದು ಸಂಚಾರಕ್ಕಾಗಿ ಹೆಬ್ರಿ ಅಜೆಕಾರು ಕೆರ್ವಾಶೆಯತ್ತ ರಸ್ತೆ ಬಳಸಿ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ಮಾಣೈ ಹಾಗು ಹಿರಿಯಡ್ಕ ನಡುವಿನ ಸೇತುವೆ ಸೇರಿದಂತೆ ರಸ್ತೆ ಸಂಚಾರ ವೇ ಕಡಿತಗೊಂಡಿದೆ.

ನೆರೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಯಾದ ಹಿರಿಯಡ್ಕ ಪುತ್ತಿಗೆ ಸೇತುವೆ ಬಂದಾಗಿದ್ದು ಸಂಪರ್ಕ ಕಡಿತಗೊಂಡಿದೆ. ಬಂದಾಗಿದ್ದು

ಹವಾಮಾನ ಇಲಾಖೆ ಮತ್ತೆ ಮೂರು ದಿನ ರೆಡ್ ಎಲರ್ಟ್ ಘೋಷಿಸಿದ್ದು ಭಾರಿ ಗಾಳಿ ಮಳೆಯಾಗುವ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!