Saturday, 27th July 2024

ಯೋಜನೆಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ

ಇಂಡಿ: ಕರ್ನಾಟಕ ಸರಕಾರದ ಪಂಚಗ್ಯಾರ0ಟಿ ಅನುಷ್ಠಾನ ಯೋಜನೆಗಳು ಬಡವರ ದೀನ, ದುರ್ಬಲ ಪರವಾಗಿದ್ದು ಇವುಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ನಾಮನಿರ್ದೇಶಿತ ಸದಸ್ಯರಾದ ನೀರ್ಮಲಾ ತಳಕೇರಿ ಹೇಳಿದರು.

ಇಂಡಿ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ನಂತರ ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿದ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರುವುದಾಗಿ ಮಾತು ಕೊಟ್ಟಿದ್ದಾರೆ ಇಂದು ಬದ್ದತೆಯಿಂದ ಕೊಟ್ಟ ಮಾತಿನಂತೆ ಈಡೇರಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷಿö್ಮÃ ಯೋಜನೆ ಸಾಕಷ್ಟು ಮಹಿಳೆಯರಿಗೆ ಆರ್ಥಿಕ ಸಮಸ್ಯ ನಿವಾರಣೆಗೆ ಸಹಕಾರಿಯಾಗಿದೆ ಈ ಪಂಚಯೋಜ ನೆಯ ನಿಜವಾದ ಫಲಾನುಭವಿಗಳಿಗೆ ತಲುಪಲಿ ಎಂದು ಸರಕಾರದ ಮಟ್ಟದಲ್ಲಿ ನಾಮನಿದೇರ್ಶಕರಾಗಿ ಆಯ್ಕೆ ಮಾಡಿದ್ದಾರೆ.

ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಸರ್ವರಿಗೂ ಸಮಬಾಳು ಸಮಪಾಲು ಎಂಬ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ನೀಡುವ ಮೂಲಕ ಪ್ರತಿಯೊಂದು ಹಂತದಲ್ಲಿ ಎಲ್ಲ ಸಮುದಾಯಗಳಿಗೆ ಗೌರವಿಸಿದ್ದಾರೆ ಇಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಾಮ ನಿರ್ದೇಶಕರನ್ನಾಗಿ ನನಗೆ ಆಯ್ಕೆ ಮಾಡಿರುವುದರಿಂದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!