Saturday, 27th July 2024

‘ಜೇಮ್ಸ್’ ಚಿತ್ರದ ಟೀಸರ್ ಪ್ರದರ್ಶನ: ಭಾವಚಿತ್ರಕ್ಕೆ ಮಾಲಾರ್ಪಣೆ, ಗೌರವ ಸಲ್ಲಿಕೆ

ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಟೀಸರ್ ಪ್ರದರ್ಶನ ಶುಕ್ರವಾರ ನಡೆಯಿತು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌ ಅವರು ದಿವಂಗತ ನಟನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ಬೃಹತ್‌ ಎಲ್‌ಇಡಿ ಪರದೆಯಲ್ಲಿ ಟೀಸರ್‌ ಪ್ರದರ್ಶಿಸಲಾಯಿತು. ನೆರೆದಿದ್ದ ಪುನೀತ್ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಪುನೀತ್‌ ರಾಜಕುಮಾರ್‌ಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಮೊಬೈಲ್‌ನಲ್ಲಿ ಟೀಸರ್‌ ಚಿತ್ರೀಕರಣ ಮಾಡಿಕೊಂಡರು. ಕಾರ್ಯಕ್ರಮಕ್ಕೂ ಮೊದಲೇ ಪುನೀತ್‌ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

‘ಜೇಮ್ಸ್’ ಚಿತ್ರಕ್ಕೆ ನಗರದ ಉದ್ಯಮಿ ಕಿಶೋರ್ ಪತ್ತಿಕೊಂಡ ಹಣ ಹೂಡಿಕೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಯುವ ಮುಖಂಡ ಸಿದ್ಧಾರ್ಥ್ ಸಿಂಗ್, ಜೋಗಿ ತಾಯಪ್ಪ, ಕಿಚಡಿ ವಿಶ್ವ ಇದ್ದರು.

error: Content is protected !!