Monday, 26th February 2024

ರೋಣಿಗಾಳ ಕ್ರಾಸ್​ನಲ್ಲಿ ಅಪಘಾತ: ಕಬಡ್ಡಿ ಕ್ರೀಡಾಪಟುಗಳ ಸಾವು

ವಿಜಯಪುರ: ಲಾರಿ ಮತ್ತು ಟವೇರಾ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಕಬಡ್ಡಿ ಕ್ರೀಡಾಪಟುಗಳು ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಮೂವರು ಕ್ರೀಡಾಪಟುಗಳ ಸ್ಥಿತಿ ಗಂಭೀರವಾಗಿದೆ. ಕೊಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್​ನಲ್ಲಿ ಘಟನೆ ಸಂಭವಿಸಿದೆ.

ಸೊಹೇಲ್(22) ಮತ್ತು ಮಹಾದೇವ(20) ಮೃತರು. ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯತ್ತ ಹತ್ತು ಜನರ ಕಬಡ್ಡಿ ತಂಡ ಟವೇರಾದಲ್ಲಿ ಪ್ರಯಾಣಿಸುತ್ತಿತ್ತು.

ಟವೇರಾದಲ್ಲಿ ಮುಂಭಾಗ ಕುಳಿತ್ತಿದ್ದ ಮಹಾರಾಷ್ಟ್ರದ ಮೂಲದ ಕ್ರೀಡಾಪಟುಗಳು ಮೃತಪಟ್ಟಿದ್ದು, ಉಳಿದ 8 ಮಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಟವೇರಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!