Saturday, 27th July 2024

ಇಂದಿನಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಕಾರ್ಯಾಚರಣೆ ಆರಂಭ

ಕಲಬುರಗಿ: ಇಂದಿನಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಾಗಿ ಕಾರ್ಯಚರಿಸಲಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಇಷ್ಟು ವರ್ಷ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಾಗಿ ಸೇವೆ ಸಲ್ಲಿಸಿದ ಸಂಸ್ಥೆ ಇನ್ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಎನ್ನುವ ಹೆಸರಿ ನೊಂದಿಗೆ ಸೇವೆ ಮುಂದುವರೆಸಲಿದೆ ಎಂದು ಹೇಳಿದರು.

ಪುತ್ರನ ಕಾರು ಅಪಘಾತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಅಪಘಾತವಾಗಿದ್ದು ಸತ್ಯ, ನಮ್ಮ ಕಾರು ಇದ್ದದ್ದು ಸತ್ಯ, ಅಪಘಾತದಲ್ಲಿ ವ್ಯಕ್ತಿಯೋರ್ವ ನಿಧನರಾಗಿದ್ದು ವಿಷಾಧನೀಯ. ಚಿದಾನಂದ ಸವದಿ ಮುಂದಿನ ಫಾರ್ಚೂನ್ ಕಾರ್ ನಲ್ಲಿದ್ದರು. ಎಫ್ ಐ ಆರ್ ಆಗಿದೆ, ಆ ಕುರಿತು ತನಿಖೆ ನಡೆಯುತ್ತಿದೆ ಎಂದರು.

ಚಿದಾನಂದ ಅಪಘಾತವಾದ ಕಾರಿನಲ್ಲಿ ಇರಲಿಲ್ಲ, ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಚಿದಾನಂದ್ ಹೆಸರು ಎಫ್ ಐ ಆರ್ ನಲ್ಲಿ ಕೈ ಬಿಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಎರಡು ದಿನದಲ್ಲಿ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಬಹಿರಂಗ ಮಾಡ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!