Saturday, 27th July 2024

ಮದಕರಿ ನಾಯಕರು ಸೌಹಾರ್ದಯುತ ಆಳ್ವಿಕೆ ನಡೆಸಿದವರು : ಜಗದೀಶ್

ಚಿಕ್ಕಮಗಳೂರು: ವೀರಮದಕರಿ ನಾಯಕರ ಆಳ್ವಿಕೆಯಲ್ಲಿ ಗುಡಿ, ಗೋಪುರ, ಕಲ್ಯಾಣಿ ನಿರ್ಮಿಸಿದ್ದಲ್ಲದೇ ಎಲ್ಲಾ ಸಮುದಾಯದೊಂದಿಗೆ ಸೌಹಾರ್ದ ಯುತ ಆಳ್ವಿಕೆ ನಡೆಸಿದ ಇತಿಹಾಸವಿದೆ ಎಂದು ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಹೇಳಿದರು.

ನಗರದ ದೋಣಿಖಣದ ಸಮೀಪದ ಸಂಘದ ಕಚೇರಿಯಲ್ಲಿ ವೀರಮದಕರಿ ನಾಯಕರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ರಾಜವೀರ ಮದಕರಿನಾಯಕ ಪಾಳೆಗಾರರಲ್ಲಿ ಸುಭದ್ರ ಆಡಳಿತದೊಂದಿಗೆ ಎಲ್ಲಾ ವರ್ಗದ ಜನತೆಗೆ ಸಮಾನತೆ ಕಲ್ಪಿಸಿದ್ದರು. ಅಲ್ಲದೇ ಅವರ ಆಡಳಿತಾವಧಿಯಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಕಲೆ ಮತ್ತು ಪುಷ್ಕರಣೆಗಳು ಇಂದಿಗೂ ಅವಿಸ್ಮರಣೀಯ ಎಂದು ತಿಳಿಸಿದರು.

ಮದಕರಿ ನಾಯಕರ ಆಡಳಿತ, ಅವರ ದೈರ್ಯ, ಜನಪರ ಕಾಳಜಿ ನಾವು ತಿಳಿದುಕೊಂಡು ಅವರಿಗೆ ಗೌರವ ಬರುವ ರೀತಿ ನಡೆದುಕೊಳ್ಳಬೇಕು. ಇಂದಿನ ಯುವಪೀಳಿಗೆ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿ ಕೊಂಡು ಮುನ್ನಡೆಯಬೇಕಿದೆ ಎಂದು ಸಲಹೆ ಮಾಡಿದರು.

ರಾಜ ವೀರ ಮದಕರಿ ೧೭೪೨ರಂದು ಚಿತ್ರದುರ್ಗದ ಜನಕಲ್ ಎಂಬ ಸ್ಥಳದಲ್ಲಿ ವಾಲ್ಮೀಕಿ ಸಮುದಾಯದಲ್ಲಿ ಜನಿಸಿದರು. ಇತಿಹಾಸದಲ್ಲಿ ಮದಕರಿ ನಾಯಕ ಎಂದೆ0ದಿಗೂ ಅಜರಾಮರ. ಇವರ ಶೌರ್ಯ, ಧೈರ್ಯ, ಸಾಹಸ ಅಂತಹದ್ದು, ಚಿತ್ರದುರ್ಗ ನಾಯಕರ ಅಳ್ವಿಕೆಯ ಕೊನೆಯ ಅರಸರಾಗಿದ್ದ ಇವರನ್ನು ಗಂಡುಗಲಿ ಮದಕರಿ ನಾಯಕ, ದುರ್ಗದ ಹುಲಿ ಎಂದು ಹಲವಾರು ಬಿರುದುಗಳಿಂದ ಜನರು ಕರೆಯುತ್ತಿದ್ದರು ಎಂದರು.

ಇದೇ ವೇಳೆ ಅ.೨೮ ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಕ್ರೀಡಾ ಕೂಟ ಆಯೋಜಿಸುವ ಸಂಬ0ಧ ಪೂರ್ವಸಿದ್ಧತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಜಗದೀಶ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮಧುಕುಮಾರ್, ತಾಲ್ಲೂಕು ಅಧ್ಯಕ್ಷ ಪ್ರದೀಪ್, ಗೌರವ ಅಧ್ಯಕ್ಷ ವಿಜಯ ಕುಮಾರ್, ಪ್ರದಾನ ಕಾರ್ಯದರ್ಶಿ ಯತೀಶ್, ಸಂಚಾಲಕರಾದ ವೀರಪ್ಪ, ಚಂದ್ರು, ಮುಳ್ಳಪ್ಪ, ಜಿಲ್ಲಾ ರಾಜ್ಯ ಪರಿಶಿಷ್ಟ ಪಂಗಡ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಯತೀಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!