Tuesday, 30th May 2023

ನನ್ನ ಕನಸಿಗೆ ಅಡ್ಡಿಯಾದಾಗ ಸಹಜವಾಗಿ ನೋವಾಯಿತು: ಜೆ.ಸಿ.ಮಾಧುಸ್ವಾಮಿ

ತುಮಕೂರು: ಕನಸಿಗೆ ಅಡ್ದಿಯಾದಾಗ ಸಹಜವಾಗಿ ನೋವಾಯಿತು. ಹಾಗಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜೀ ನಾಮೆ ನೀಡಲು ನಿರ್ಧರಿಸಿದ್ದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಪದೇ ಪದೇ ಖಾತೆ ಬದಲಾವಣೆ ಮಾಡಿದ್ದು ಮನಸ್ಸಿಗೆ ನೋವು ತಂದಿತು. ಹಾಗಾಗಿ ರಾಜೀನಾಮೆ ನಿರ್ಧಾರ ಮಾಡಿದ್ದೆ. ಹಿರಿಯರ ಮಧ್ಯಪ್ರವೇಶದಿಂದ ನಿರಾವರಿ ಖಾತೆ ಮರಳಿ ಕೊಟ್ಟಿದ್ದಾರೆ. ನೀರಾವರಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲು ನಿರ್ಧರಿಸಿ ಕೇಳಿದ್ದೆ. ನನ್ನ ಕನಸಿಗೆ ಅಡ್ಡಿಯಾದಾಗ ಸಹಜವಾಗಿ ನೋವಾಯಿತು. ಈಗ ನೀಡಿರುವ ಖಾತೆ ಸಮಾಧಾನ ತಂದಿದೆ ಎಂದರು.

ಇನ್ನು ರೈತರ ಪರೇಡ್ ವಿಚಾರವಾಗಿ ಮಾತನಾಡಿದ ಸಚಿವರು ಲಕ್ಷಾಂತರ ಜನ ಸೇರಿದರೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ನೀಡಿಲ್ಲ. ಕಾನೂನು ಪಾಲನೆಯಲ್ಲಿ ಇದು ಸಹಜ ಎಂದು ಹೇಳಿದರು.

error: Content is protected !!