Saturday, 27th July 2024

ಮುಳ್ಳಯ್ಯನಗಿರಿಗೆ ಪ್ರವಾಸಿಗರನ್ನು ಆಕರ್ಷಿಸಲು ರೋಪ್‌ವೇ: ಸೂಕ್ಷ್ಮ ಪ್ರದೇಶಕ್ಕೆ ಮಾರಕ

ಚಿಕ್ಕಮಗಳೂರು: ರಾಜ್ಯದಲ್ಲೇ ಅತೀ ಎತ್ತರದ ಗಿರಿಶಿಖರವಾದ ಮುಳ್ಳಯ್ಯನಗಿರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ರೋಪ್‌ವೇ ನಿರ್ಮಿಸಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದು ಈ ಸೂಕ್ಷö್ಮ ಪ್ರದೇಶಕ್ಕೆ ಮಾರಕವಾಗುವ ಲಕ್ಷಣಗಳಿವೆ.
ಮುಳ್ಳಯ್ಯನಗಿರಿ ಸಮುದ್ರ ಮಟ್ಟದಿಂದ ೬೩೧೭ ಅಡಿ ಎತ್ತರದಲ್ಲಿರುವ ಹಲವು ಬೆಟ್ಟಗಳ ನ್ನೊಳಗೊಂಡಿರುವ ಗಿರಿಶ್ರೇಣಿ.ಈ ಶಿಖರ ಕೇವಲ ನಿಸರ್ಗ ಸೌಂದರ್ಯಕ್ಕೆ ಮೀಸಲಾಗಿಲ್ಲ. ಇದೊಂದುಯಾತ್ರಾ ಸ್ಥಳ ಸಹ.ಪ್ರತೀ ವರ್ಷಏಪ್ರಿಲ್ ತಿಂಗಳಲ್ಲಿ ಸೀತಾಳಯ್ಯನ ಗಿರಿ ಸೇರಿದಂತೆ ಈ ಬೆಟ್ಟದಲ್ಲೂಜಾತ್ರೆ ನಡೆಯುತ್ತದೆ.
ಈ ಬೆಟ್ಟ ಶ್ರೇಣಿಚಂದ್ರದ್ರೋಣ ಪರ್ವತದ ಸಾಲಿಗೆ ಸೇರಿದ್ದು, ಇದು ಹಲವಾರು ನದಿಗಳಿಗೆ ಉಗಮ ಸ್ಥಾನವೂ ಆಗಿದೆ.ಅತ್ಯಂತ ವಿರಳವಾದ ಮತ್ತುಅಲ್ಲಿಗೇ ಸೀಮಿತವಾದ ಬಿಳಿ ಹೊಟ್ಟೆಯ ಶಾರ್ಟ್ವಿಂಗ್ ಪಕ್ಷಿಗಳು, ಸ್ಕೇಲೀಥ್ರಶ್ ಪಕ್ಷಿಗಳು ಕಂಡು ಬರುತ್ತವೆ. ವಿಶೇಷ ವೆಂದರೆ, ಗಿಡುಗ ಮತ್ತು ಹದ್ದುಗಳ ಸಂತಾನಾಭಿವೃದ್ಧಿಗೂ ಚಳಿಗಾಲದಲ್ಲಿ ವಲಸೆ ಬರುತ್ತವೆ. ಭಾರದ್ವಾಜ ಪಕ್ಷಿಗಳನ್ನು ಕಾಣಬಹುದು. ಹುಲಿಯಓಡಾಟ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡುಕುರಿಗಳು ಕಾಣಸಿಗುತ್ತವೆ. ಇತ್ತೀಚೆಗೆ ಪ್ರವಾಸೋದ್ಯಮ ಈ ಬೆಟ್ಟಸಾಲುಗಳಲ್ಲಿ ಅಧಿಕವಾಗಿದ್ದು, ಇದು ಅನಿಯಂತ್ರಿತವೂ ಆಗಿದೆ.
ವಾರಾ೦ತ್ಯ ಹಾಗೂ ದೀರ್ಘರಜಾದಿನಗಳಲ್ಲಿ ಸಾವಿರಾರು ವಾಹನಗಳ ಭರಾಟೆ ಹಾಗೂ ಜನಜಂಗುಳಿಯಿ೦ದ ಕೂಡಿದ್ದು, ಈಗಾಗಲೇ ಈ ಬೆಟ್ಟ ಪ್ರದೇಶದಲ್ಲಿಘನತ್ಯಾಜ್ಯದ ಪ್ರಮಾಣವೂ ಮಿತಿ ಮೀರಿದೆ.ವನ್ಯಜೀವಿಗಳ ನಿರಾತಂಕ ಬದುಕಿಗೂ ಇವು ಮಾರಕ ವಾಗಿವೆ.
ಈಗ ಬರುತ್ತಿರುವ ಪ್ರವಾಸಿಗರ ಸಂಖ್ಯೆಯನ್ನೇ ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಬರುವ ಪ್ರವಾಸಿಗರಲ್ಲಿ ಬಹುತೇಕ ಮಂದಿ ಈ ನಿಸರ್ಗ ಸಿರಿಯ ಪ್ರದೇಶಗಳನ್ನು ತಮ್ಮ ಮೋಜು-ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದು, ಪ್ಲಾಸ್ಟಿಕ್ ಚೀಲ ಹಾಗೂ ನೀರಿನ ಬಾಟಲಿಗಳ ಜೊತೆಗೆಇದೊಂದುರೀತಿ ಮದ್ಯಪಾನಕ್ಕೂ ಬಳಕೆಯಾಗಿ ಆ ತ್ಯಾಜ್ಯವೂಅಧಿಕವಾಗಿದೆ.ಈ ರೀತಿಯಜನ, ವಾಹನದಒತ್ತಡ ಮುಂದುವರಿದಲ್ಲಿ ಈ ದಟ್ಟ ಹಸುರಿನ ಪ್ರದೇಶತನ್ನ ಸೌಂದರ್ಯವನ್ನೇ ಮುಕ್ಕಾಗಿಸಿಕೊಳ್ಳುವ ಅಪಾಯವಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿಸುವ ಬದಲು ಇದೀಗ ರೋಪ್‌ವೇ ನಿರ್ಮಾಣ ಮಾಡಿ ಪ್ರತಿನಿತ್ಯಈ ಪರಿಸರ ಸೂಕ್ಷö್ಮಪ್ರದೇಶ ಜನಜಂಗುಳಿಯಿ೦ದ ಕೂಡುವಂತೆ ಮಾಡಲಿದ್ದು, ಜೊತೆಗೆ ಬೆಟ್ಟದ ಇಳಿಜಾರಿನಲ್ಲಿ ಆಳವಾದ ಗುಂಡಿ ಗಳನ್ನು ತೋಡಿಖಾಯಂ ಆಗಿ ಕಂಬಗಳನ್ನು ನೆಟ್ಟುರೋಪ್‌ವೇ ಸೌಲಭ್ಯ ನೀಡಿದಲ್ಲಿ ಈ ಪ್ರದೇಶ ಮತ್ತಷ್ಟು ಹಾನಿಗೆ ಒಳಗಾಗುವ ಆತಂಕವಿದೆ. ಅಲ್ಲದೆರೋಪ್‌ವೇ ನಿರ್ಮಾಣಕ್ಕಾಗಿ ೧೬ ವರ್ಷಗಳಿಗೊಮ್ಮೆ ಇಡೀ ಬೆಟ್ಟವನ್ನು ನೀಲಿ ಹೂವುಗಳಿಂದ ಆವರಿಸುವ ಗುರಿಗಿ ಹೂವಿನ ಹಸಿರು ಪತ್ತಲವನ್ನುಕಿತ್ತು ಯಂತ್ರಗಳನ್ನು ಕೊಂಡೊಯ್ಯಲು ರಸ್ತೆಗಳನ್ನೂ ನಿರ್ಮಿಸುವುದರಿಂದ ನೈಸರ್ಗಿಕ ಸೌಂದರ್ಯ ಹಾಳಾಗಿ ಒಂದುರೀತಿಯಕೃತಕತೆ ಆವರಿಸಿಕೊಳ್ಳಲಿದೆ.
ರೋಪ್‌ವೇ ನಿರ್ಮಾಣ ಮುಂದಿನ ದಿನಗಳಲ್ಲಿ ಲಾಭ ಗಳಿಕೆಯನ್ನಷ್ಟೇ ಗಮನದಲ್ಲಿಟ್ಟುಕೊಂಡಿರುವ ಕಂಪನಿಗಳಿಗೆ ಅವಕಾಶ ನೀಡಲಿದ್ದು, ಈಗಿರುವ ಪಾವಿತ್ರö್ಯತೆ ಮಂಕಾಗಿ ಮುಂದಿನ ದಿನಗಳಲ್ಲಿ ಈ ಪ್ರದೇಶ ಜನಜಂಗುಳಿಯ ತಾಣವಾಗುವುದಲ್ಲದೆ, ನೀರಿನ ಮೂಲಕ್ಕೂ ಕುತ್ತುತರುವ ಸಂಭವವಿದೆ.
ಪಶ್ಚಿಮ ಘಟ್ಟದಚಂದ್ರದ್ರೋಣ ಪರ್ವತ ಭೂಪದರದಿಂದ ಕೂಡಿದ್ದು, ಕೆತ್ತನೆಆದಾಕ್ಷಣ ಬಿರುಸಿನ ಮಳೆಗೆ ಕುಸಿತಕ್ಕೊಳಗಾಗುತ್ತದೆ. ಈಗಾಗಲೇ ವಿಪರೀತ ಮಳೆ ಬಂದಾಗರಸ್ತೆ ನಿರ್ಮಾಣವಾಗಿರುವಲ್ಲಿ ಭೂಕುಸಿತ ಉಂಟಾಗುವುದು ಸಾಮಾನ್ಯವಾಗಿದ್ದು, ರೋಪ್‌ ವೇ ನಿರ್ಮಾಣಕ್ಕೆ ಈ ಇಳಿಜಾರಿನಲ್ಲಿ ಗುಂಡಿಗಳನ್ನು ತೋಡಿದಲ್ಲಿಇನ್ನಷ್ಟು ಅನಾಹುತ ಆಗುವ ಸಂಭವವೂ ಇದೆ.
ಸರ್ಕಾರ ಈ ಒಂದು ನಿಸರ್ಗ ಸೌಂದರ್ಯವನ್ನು ಹೊಂದಿರುವ ಹಾಗೂ ಪ್ರಾಣಿ-ಪಕ್ಷಿಗಳ ನಿರಾತಂಕ ಬದುಕಿಗೆ ಆವಾಸ ಸ್ಥಾನವೂ ಆಗಿರುವ  ಈ ಬೆಟ್ಟ ಪ್ರದೇಶದಲ್ಲಿರೋಪ್‌ವೇ ನಿರ್ಮಿಸಿ ಜನ. ವಾಹನದ ಭರಾಟೆಯನ್ನು ಹೆಚ್ಚಿಸಬಾರದೆಂದು ಒತ್ತಾಯಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!