Saturday, 10th June 2023

ಹಬ್ಬದ ದಿನವೇ ಮಟನ್ ವ್ಯಾಪಾರಿ ಹತ್ಯೆ

ಯಾದಗಿರಿ: ಈದ್ ಹಬ್ಬದ ದಿನವೇ ಶಾಹಪುರ ತಾಲೂಕಿನ ಗೂಗಿ ಗ್ರಾಮದಲ್ಲಿ ದುಷ್ಕರ್ಮಿಗಳು ನೆತ್ತರು ಹರಿಸಿದ್ದಾರೆ.

ಬುಧವಾರ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದ ಖಾಸಿಂಸಾಬ್ ಚೌದ್ರಿ (50 ವ) ಎಂಬಾತನನ್ನು ತಡೆದು ಆತನನ್ನು ಕೆಳಗೆ ಬೀಳಿಸಿ ತಲೆಗೆ ಹರಿತವಾದ ಮಚ್ಚಿನಿಂದ ಹೊಡೆದು ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ಮಟನ್ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದು, ಕೊಲೆಗಡುಕರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!