Saturday, 7th September 2024

ಮೈಸೂರು ದಸರಾ ವೀಕ್ಷಣೆಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ಆರಂಭ

ಮೈಸೂರು: ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಗಜಪಯಣಕ್ಕೂ ಸಿದ್ಧತೆಗಳು ನಡೆದಿವೆ. ದೇಶ ವಿದೇಶಗಳಿಂದ ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಪಾಸ್ ವ್ಯವಸ್ಥೆ ಮಾಡಿದ್ದು, ದಸರಾ ಸಮಯದಲ್ಲಿ ನಿಗದಿಪಡಿಸಲಾದ ಹಲವಾರು ಕಾರ್ಯಕ್ರಮಗಳನ್ನು ವೀಕ್ಷಿಸಲು ಜಿಲ್ಲಾಡ ಳಿತವು ಬುಧವಾರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಮಾರಾಟ ಪ್ರಾರಂಭಿ ಸಿದೆ. ಈ ಟಿಕೆಟ್ ಮಾರಾಟವು ಬುಧವಾರ ಬೆಳಿಗ್ಗೆ 10 ರಿಂದ ಪ್ರಾರಂಭವಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಿಸಲು 6,000 ರೂ. ಬೆಲೆಯ ದಸರಾ ಗೋಲ್ಡ್ ಕಾರ್ಡ್‌ನ್ನು ಬಿಡುಗಡೆ ಮಾಡಲಾಗಿದೆ. ಒಬ್ಬ ವ್ಯಕ್ತಿಯು ಎರಡು ಗೋಲ್ಡ್‌ ಕಾರ್ಡ್‌ಗಳನ್ನು ಮಾತ್ರ ಖರೀದಿಸಬಹುದು.

ಇದಲ್ಲದೆ 3,000 ರೂ. ಮತ್ತು 2,000 ರೂ. ಟಿಕೆಟ್‌ಗಳು ಪ್ಯಾಲೇಸ್‌ ಗ್ರೌಂಡ್ ಆವರಣದಲ್ಲಿ ಜಂಬೂ ಸವಾರಿ ವೀಕ್ಷಿಸಲು ಜನರು ಖರೀದಿಸಬಹುದಾಗಿದೆ. ಬನ್ನಿಮಂಟಪದಲ್ಲಿ ಟಾರ್ಚ್‌ಲೈಟ್ ಪರೇಡ್‌ಗೆ 500 ರೂ. ಟಿಕೆಟ್‌ಗಳು ಇವೆ. ಈ ಎಲ್ಲಾ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಟಿಕೆಟ್ ಬೆಲೆಗಳು ದುಪ್ಪಟ್ಟಾಗಿದೆ. ಕಳೆದ ವರ್ಷ ಜಂಬೂ ಸವಾರಿ ವೀಕ್ಷಿಸಲು ಟಿಕೆಟ್ ದರ 1,000 ರೂ. ಇತ್ತು.

ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ನಂತರ, ಟಿಕೆಟ್‌ಗಳ ಹಾರ್ಡ್ ಕಾಪಿಗಳನ್ನು ಎಲ್ಲಿ ಮತ್ತು ಯಾವಾಗ ಸಂಗ್ರಹಿಸಬಹುದು ಎಂಬುದರ ಕುರಿತು ಖರೀದಿದಾರರು ಎಸ್‌ಎಂಎಸ್‌ ಮತ್ತು ಮೇಲ್ ಮೂಲಕ ಮಾಹಿತಿಯನ್ನು ಸ್ವೀಕರಿಸುತ್ತಾರೆ.

ಮೈಸೂರಿನ ಅರಮನೆ ಆವರಣದಲ್ಲಿಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಕ್ಕಳ ದಸರಾ ಉದ್ಘಾಟಿಸಿದ್ದಾರೆ. ಕವನ ವಾಚನ ಕಾರ್ಯಕ್ರಮವನ್ನು ಸವಿತಾ ನಾಗಭೂಷಣ ಉದ್ಘಾಟಿಸಿದ್ದಾರೆ. ಅರಮನೆ ಮೈದಾನ ಪ್ರದೇಶದಲ್ಲಿ ಸಂಜೆ 7 ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾವನ್ನು ನಟ ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ.

ಇಂದಿನಿಂದ ನಾಲ್ಕು ದಿನಗಳ ಕಾಲ ಯುವ ದಸರಾ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!